DAKSHINA KANNADA
ದಕ್ಷಿಣಕನ್ನಡದಲ್ಲಿ ನಕಲಿ HSRP ನಂಬರ್ ಪ್ಲೇಟ್ ಹಾವಳಿ…ಪೆಟ್ರೋಲ್ ಬಂಕ್ ನಲ್ಲಿ ಪತ್ತೆಯಾದ ಒಂದೇ ನಂಬರ್ ನ ಎರಡು ಕಾರು
ಪುತ್ತೂರು ಜನವರಿ 22: ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿದರೆ ಅದನ್ನು ನಕಲಿ ಮಾಡಲು ಸಾಧ್ಯವೇ ಇಲ್ಲ ಎಂದು ಆರ್ ಟಿಓ ಹೇಳಿದರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ಬರೀ ನಕಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿ ದರೋಡೆ, ಪೆಟ್ರೋಲ್ ಬಂಕ್ ಗಳಲ್ಲಿ ಹಣ ನೀಡದೆ ಪರಾರಿಯಾಗುತ್ತಿರುವ ಘಟನೆಗೆಳು ಹೆಚ್ಚಾಗಿದೆ.
ಕೇಂದ್ರ ಸರಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನ್ನು ಎಲ್ಲಾ ವಾಹನಗಳಿಗೆ ಕಡ್ಡಾಯಗೊಳಿಸಿದೆ. ಕರ್ನಾಟಕದಲ್ಲೂ ಎಲ್ಲಾ ವಾಹನಗಳಿಗೂ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ ನಕಲಿ ಮಾಡಲು ಆಗುವುದಿಲ್ಲ ಎಂದು ಹೇಳಿರುವ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನೇ ಇದೀಗ ದರೋಡೆಕೋರರು ನಕಲಿ ಮಾಡಿ ದರೋಡೆಗೆ ಬಳಸುತ್ತಿದ್ದಾರೆ.
ಅಲ್ಲದೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್, ಡಿಸೇಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗುತ್ತಿರುವ ವಾಹನಗಳಲ್ಲಿ ನಕಲಿ ನಂಬರ್ ಪ್ಲೇಟ್ ಬಳಕೆಯಾಗುತ್ತಿದೆ. ಇತ್ತೀಚೆಗೆ ನಡೆದ ಪ್ರಕರಣದಲ್ಲಿ ಒಂದೇ ನೊಂದಣಿ ನಂಬರ್ ನ ಎರಡು ವಾಹನ ಸುಳ್ಯ ಮತ್ತು ಕಡಬದಲ್ಲಿ ಪತ್ತೆಯಾಗಿದೆ. KA 01 MX 9632 ನಂಬರ್ ನ ಥಾರ್ ಮತ್ತು ಮಹೇಂದ್ರ ಎಸ್.ಯು.ವಿ ಕಾರು ಡಿಸೇಲ್ ಹಾಕಿ ಹಣಕೊಡದೆ ಪರಾರಿಯಾಗಿದ್ದಾರೆ.
ಸುಳ್ಯದ ಪೈಚಾರು ಪೆಟ್ರೋಲ್ ಬಂಕ್ ಮತ್ತು ಕಡಬದ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ವಾಹನ್ ಆ್ಯಪ್ ಮೂಲಕ ನೋಡಿದಾಗ KA 01 MX 9632 ನಂಬರ್ ನಲ್ಲಿ ಹುಂಡೈ ಐ 20 ಕಾರು ರೆಜಿಸ್ಟ್ರೇಷನ್ ಆಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣದ ಹಿನ್ನಲೆಯಲ್ಲಿ ಒಂದೇ ನಂಬರ್ ಪ್ಲೇಟ್ ನ ವಾಹನಗಳು ಕುತೂಹಲಕ್ಕೆ ಕಾರಣವಾಗಿದೆ.