LATEST NEWS
ನಕಲಿ ಚಿನ್ನಾಭರಣ ಮಾರಾಟಕ್ಕೆ ಯತ್ನ ಒರ್ವನ ಬಂಧನ
ನಕಲಿ ಚಿನ್ನಾಭರಣ ಮಾರಾಟಕ್ಕೆ ಯತ್ನ ಒರ್ವನ ಬಂಧನ
ಮಂಗಳೂರು ಜೂನ್ 07 : ನಕಲಿ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರದ ನಾಗ್ಪುರ್ ನಿವಾಸಿ ಪ್ರವೀಣ್ ವೀರಾ ರಾತೋಡ್ (21) ಎಂದು ಗುರುತಿಸಲಾಗಿದೆ. ಬಂಧಿತನಿಂದ 900 ಗ್ರಾಂ ತೂಕದ ನಕಲಿ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತೊಕ್ಕೊಟು ಎಂಬಲ್ಲಿನ ಹರಿಪ್ರಸಾದ್ ಕಾಂಪ್ಲೆಕ್ಸ್ನಲ್ಲಿರುವ ಎಸ್.ಮೈ.ಶಾಪ್ ಫ್ಯಾನ್ಸಿ ಅಂಗಡಿಗೆ ಬಂದ ಆರೋಪಿ ಪ್ರವೀಣ್ ಫ್ಯಾನ್ಸಿ ಅಂಗಡಿ ಮಾಲಕ ಲೊಕೇಶ್ ಕುಮಾರ್ ಅವರ ಬಳಿ ನಕಲಿ ಚಿನ್ನದ ಆಭರಣಗಳನ್ನು ಅಸಲಿಯ ಚಿನ್ನದ ಆಭರಣಗಳೆಂದು ಹೇಳಿ ನಂಬಿಸಿದ್ದಾನೆ. ಈ ಚಿನ್ನಾಭರಣ ಭೂಮಿ ಅಗೆಯುವಾಗ ದೊರೆತಿದ್ದು ಅತ್ಯಂತ ತುರ್ತು ಪರಿಸ್ಥತಿ ಎದುರಾಗಿದ್ದು ಈ ಕಾರಣ ಚಿನ್ನಾಭರಣ ಮಾರಾಟಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಕ್ಕೆ ಕೇವಲ 3 ಲಕ್ಷ ರೂಪಾಯಿ ನೀಡುವಂತೆ ಆರೋಪಿ ಪ್ರವಿಣ್ ಹೇಳಿದ್ದಾನೆ. ಈ ಕುರಿತು ಸಂಶಯಗೊಂಡ ಫ್ಯಾನ್ಸಿ ಅಂಗಡಿ ಮಾಲಿಕ ಲೊಕೇಶ್ ಸ್ಥಳೀಯ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪರಿಣಾಮ ನಕಲಿ ಚಿನ್ನಾಭರಣವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಆರೋಪಿ ಪ್ರವೀನ್ ವೀರಾ ರಾತೋಡ್ ನನ್ನು ಮಾಲು ಸಮೇತ ಬಂಧಿಸಿದ್ದಾರೆ. ಆರೋಪಿ ಪ್ರವೀಣ್ ರಾತೋಡ್ ನೊಂದೊಗಿದ್ದ ಮತ್ತೋಬ್ಬ ಪರಾರಿಯಾಗಿದ್ದಾನೆ.