Connect with us

LATEST NEWS

ಧೋನಿ, ಶಿಲ್ಪಾ ಶೆಟ್ಟಿ ಸೇರಿ ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಹೆಸರಲ್ಲಿ ನಕಲಿ ಕ್ರೆಡಿಟ್ ಕಾರ್ಡ್: ಐವರ ಸೆರೆ

ವದೆಹಲಿ, ಮಾರ್ಚ್ 03: ವಂಚಕರ ಗುಂಪೊಂದು ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಹೆಸರಿನಲ್ಲಿ ನಕಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚಿಸಿರುವ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.

ವಂಚಕರು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಜಿಎಸ್‌ಟಿ ಗುರುತಿನ ಸಂಖ್ಯೆಗಳಿಂದ ಪ್ಯಾನ್ ವಿವರಗಳನ್ನು ಪಡೆದುಕೊಂಡು ಅವುಗಳನ್ನು ಬಳಸಿ ಪುಣೆ ಮೂಲದ ಫಿನ್‌ಟೆಕ್ ಸ್ಟಾರ್ಟ್‌ಅಪ್ ‘ಒನ್ ಕಾರ್ಡ್’ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಅಲ್ಲದೆ, ಈ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ₹50 ಲಕ್ಷವನ್ನೂ ವಂಚಿಸಲಾಗಿದೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಶಹಾದ್ರಾ ಡಿಸಿಪಿ ರೋಹಿತ್ ಮೀನಾ ಹೇಳಿದ್ದಾರೆ. ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಅವರ ಹೆಸರು ಮತ್ತು ವಿವರಗಳನ್ನು ವಂಚಕರು ಬಳಸಿದ್ದಾರೆ ಎಂದು ರೋಹಿತ್ ಮೀನಾ ಹೇಳಿದ್ದಾರೆ.

‘ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದೂ ಅವರು ಹೇಳಿದ್ದಾರೆ. ಬಂಧಿತ ಆರೋಪಿಗಳನ್ನು ಸುನಿಲ್ ಕುಮಾರ್, ಮೊಹಮದ್ ಆಸಿಫ್, ಪುನೀತ್, ಪಂಕಜ್, ವಿಶ್ವ ಭಾಸ್ಕರ್ ಶರ್ಮಾ ಎಂದು ಗುರುತಿಸಲಾಗಿದೆ.

500 ರೂ. ಕೊಟ್ಟು ಜನ ಸೇರಿಸಿ ಎಂಬ ಸಿದ್ದರಾಮಯ್ಯ ವೀಡಿಯೋ ವೈರಲ್‌

‘ವಿಚಾರಣೆ ವೇಳೆ ವಂಚನೆಗೆ ಸಂಬಂಧಿಸಿದ ಕಾರ್ಯಾಚರಣೆಯ ವಿಧಾನವನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಈ ಸೆಲೆಬ್ರಿಟಿಗಳ ಜಿಎಸ್‌ಟಿ ವಿವರಗಳನ್ನು ಆರೋಪಿಗಳು ಗೂಗಲ್‌ನಲ್ಲಿ ಪಡೆಯುತ್ತಿದ್ದರು. ಜಿಎಸ್‌ಟಿಯ ಮೊದಲೆರಡು ಸಂಖ್ಯೆಗಳು ಸ್ಟೇಟ್ ಕೋಡ್ ಮತ್ತು ನಂತರದ ಸಂಖ್ಯೆಗಳು ಪ್ಯಾನ್ ಸಂಖ್ಯೆಗಳು ಎಂಬುದು ಆರೋಪಿಗಳಿಗೆ ತಿಳಿದಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ವಾಮಮಾರ್ಗದ ಮೂಲಕ ಪ್ಯಾನ್‌ ಕಾರ್ಡ್‌ಗಳನ್ನು ತಯಾರಿಸಿ ಅವುಗಳ ಮೇಲೆ ತಮ್ಮ ಚಿತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಡಿಯೊ ಪರಿಶೀಲನೆಯ ಸಮಯದಲ್ಲಿ ಚಿತ್ರ ಹೊಂದಿಕೆಯಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಉದಾಹರಣೆಗೆ, ಅಭಿಷೇಕ್ ಬಚ್ಚನ್ ಅವರ ಪ್ಯಾನ್ ಕಾರ್ಡ್‌ನಲ್ಲಿ ಅವರ ಪ್ಯಾನ್ ಮತ್ತು ಜನ್ಮ ದಿನಾಂಕವಿದೆ. ಆದರೆ, ಚಿತ್ರ ಮಾತ್ರ ಆರೋಪಿಗಳಲ್ಲಿ ಒಬ್ಬನದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *