DAKSHINA KANNADA
ದೈವದ ಕೃಪೆಯಿಂದ ತಪ್ಪಿದ ಮಂಗಳೂರಿನ ದೊಡ್ಡ ಅನಾಹುತ; ದೈವದ ನಂಬಿಕೆ ಆಟೋ ಚಾಲಕ ಪುರುಷೋತ್ತಮ್ ಅವರನ್ನು ಕಾಪಾಡಿದೆ…
ಮಂಗಳೂರು, ನವೆಂಬರ್ 21: ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಬಾಂಬ್ ಸ್ಫೋಟ. ಸುತ್ತಮುತ್ತಲು ಆವರಿಸಿಕೊಂಡ ದಟ್ಟ ಹೊಗೆ. ಶೇಕಡ 60 ಸುಟ್ಟುಹೋದ ಆತಂಕವಾದಿ. ಅಚ್ಚರಿಯ ರೀತಿಯಲ್ಲಿ ಪಾರಾದ ಆಟೋ ಚಾಲಕ ಪುರುಷೋತ್ತಮ್. ಈ ಗ್ರೇಟ್ ಎಸ್ಕೇಪ್ ಗೆ ಪುರುಷೋತ್ತಮ್ ದೈವಗಳ ಮೇಲಿಟ್ಟ ನಂಬಿಕೆ ಅಂತ ಮಂಗಳೂರಿನ ಜನ ಮಾತನಾಡುತ್ತಿದ್ದಾರೆ.
ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಭಾರಿ ಪ್ರಮಾಣದ ಸ್ಪೋಟವಾಗಿದೆ. ಮಂಗಳೂರಿನ ನಾಗುರಿ ಪರಿಸರದಲ್ಲಿ ಆತಂಕ ಮನೆ ಮಾಡಿದೆ. ಆಟೋರಿಕ್ಷಾ ಸ್ಪೋಟ ಆದ ದೃಶ್ಯ ಕಂಡ್ರೆ ಎಂತವರು ಕೂಡ ಬೆಚ್ಚಿ ಬೀಳಬೀಳ್ಬೇಕು. ಆತಂಕವಾದಿ ಆರೋಪಿಯ ದೇಹ ಶೇಕಡ 60ರಷ್ಟು ಸುಟ್ಟಿದೆ. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನಡೆಯುತ್ತಿದೆ. ಅದೇ ಆಟೋದಲ್ಲಿದ್ದ ಚಾಲಕ ಪುರುಷೋತ್ತಮ್ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ ಇದಕ್ಕೆ ಉಜ್ಜೋಡಿಯ ಮಹಾಕಾಳಿ ಕೊರಗಜ್ಜ ದೈವಗಳೇ ಕಾರಣ ಅಂತ ಕುಟುಂಬ, ಆಪ್ತರಿಷ್ಟರು ಹೇಳುತ್ತಿದ್ದಾರೆ.ಉಜ್ಜೋ ಡಿಯ ನಿವಾಸಿಯಾಗಿರುವ ಪುರುಷೋತ್ತಮ್ ಮಹಾಕಾಳಿ ಮತ್ತು ಕೊರಗಜ್ಜ ದೈವದ ಭಕ್ತ. ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ದೇವರಾದನೆಯ ಸಂದರ್ಭದಲ್ಲಿ ದೈವದ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ದೈವಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಪುರುಷೋತ್ತಮ್ ಜೀವ ಉಳಿಸಿದೆ.
ದೈವವನ್ನು ಆರಾಧಿಸಿದರೆ ದೈವ ಭಕ್ತನ ಕೈಬಿಡೋದಿಲ್ಲ ಎಂಬೂದ ಮತ್ತೆ ಸಾಭೀತಾಗಿದೆ. ಪುರುಷೋತ್ತಮ್ ಕುಟುಂಬ, ಆಪ್ತರು, ಊರಿನವರು ಉಜ್ಜೋಡಿ ದೈವಸ್ಥಾನವನ್ನು ನೆನೆದು ಕೈಮುಗಿದಿದ್ದಾರೆ.