Connect with us

    LATEST NEWS

    ಕೇರಳ – ಫೇಸ್ ಬುಕ್ ಪ್ರ್ಯಾಂಕ್ ಗೆ ನವಜಾತ ಶಿಶು ಸೇರಿದಂತೆ ಮೂವರ ಬಲಿ

    ಕೇರಳ : ಸಾಮಾಜಿಕ ಜಾಲತಾಣದಲ್ಲಿ ಪ್ರ್ಯಾಂಕ್ ಮಾಡಲು ಹೋಗಿ ನವಜಾತ ಶಿಶು ಸೇರಿದಂತೆ ಮೂವರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದ್ದು, ನವಜಾತ ಶಿಶುವಿನ ಸಾವಿನ ಬೆನ್ನಟ್ಟಿದ್ದ ಪೊಲೀಸರ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.


    ಜನವರಿ 5 ರಂದು ಬೆಳಿಗ್ಗೆ 6.30 ರ ಸುಮಾರಿಗೆ ಕೊಲ್ಲಂ ಜಿಲ್ಲೆಯ ಕಲ್ಲುವಾತುಕ್ಕಲ್ ಪಟ್ಟಣದ ದೇವಾಲಯದ ಬಳಿ ಒಣಗಿದ ಎಲೆಗಳ ರಾಶಿಯಲ್ಲಿ ನವಜಾತ ಗಂಡು ಶಿಶುವೊಂದು ಪತ್ತೆಯಾಗಿತ್ತು, ಮಗುವನ್ನು ಆಸ್ಪತ್ರೆಗೆ ಸೇರಿಸಿದರೂ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿತ್ತು.

    ಈ ಪ್ರಕರಣದ ಬೆನ್ನತ್ತಿದ್ದ ಕೇರಳ ಪೊಲೀಸರು ಮಗುವಿನ ತಾಯಿಯನ್ನು ಹುಡುಕಲು ಮಗು ದೊರೆತ ಸ್ಥಳದಲ್ಲಿರುವ ಎಲ್ಲಾ ಜನರ ಡಿಎನ್ಎ ಪರೀಕ್ಷೆಯನ್ನು ನಡೆಸಿದ್ದರು. ಎಂಟು ಡಿಎನ್‌ಎ ಪರೀಕ್ಷೆಗಳ ನಂತರ ಅವರು ಅಂತಿಮವಾಗಿ 24 ವರ್ಷದ ರೇಷ್ಮಾ ಎಂಬಾಕೆಯನ್ನು ಪೊಲೀಸರು ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಿದರು.


    ವಿಚಾರಣೆ ವೇಳೆ ರೇಷ್ಮಾ ತಾನು ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದು, ಈ ಹಿನ್ನಲೆ ಅವರ ಜೊತೆ ತೆರಳಲು ತನ್ನ ಮಗುವನ್ನು ದೇವಸ್ಥಾನದ ಬಳಿ ಬಿಟ್ಟಿದ್ದೆ ಎಂದು ತಿಳಿಸಿದ್ದಳು.
    ಆರೋಪಿ ರೇಷ್ಮಾ ಅವಳ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದು, ಅವರಿಗೆ ಹಾಗೂ ಅವರ ಮನೆಯವರಿಗೆ ರೇಷ್ಮಾ ಗರ್ಭಿಣಿ ಎನ್ನುವ ವಿಚಾರ ತಿಳಿದಿರಲ್ಲಿಲ್ಲ. ಈ ನಡುವೆ ರೇಷ್ಮಾ ಅನಂತು ಎಂಬಾಂತನೊಂದಿಗೆ ಫೆಸ್ ಬುಕ್ ಮೂಲಕ ಚಾಟಿಂಗ್ ನಲ್ಲಿ ತೊಡಗಿದ್ದು, ಆತನೊಂದಿಗೆ ತೆರಳಲು ಬಯಸಿದ್ದಳು ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.

    ಆದರೆ ಮಹಿಳೆಯ ಫೇಸ್‌ಬುಕ್ ಸ್ನೇಹಿತನನ್ನು ಕಂಡುಹಿಡಿಯಲು ನಡೆಸಿದ ತನಿಖೆ ವೇಳೆ, ಮಹಿಳೆಯ ಅತ್ತಿಗೆ ಆರ್ಯ ಮತ್ತು ಸೊಸೆ ಗ್ರೀಷ್ಮಾ ಎಂಬ ಇಬ್ಬರು ಸಂಬಂಧಿಕರನ್ನು ವಿಚಾರಣೆಗಾಗಿ ಕರೆತಂದಿದ್ದಾರೆ. ಹಲವು ಫೇಸ್‌ಬುಕ್ ಖಾತೆಗಳನ್ನು ಬಳಸುತ್ತಿದ್ದ ಗ್ರೀಷ್ಮಾ ಅವರು ಒಂದು ಖಾತೆಯನ್ನು ನಿರ್ವಹಿಸಲು ಆರ್ಯ ಎಂಬ ಹೆಸರಿನಲ್ಲಿರುವ ಮೊಬೈಲ್ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದರಿಂದ ಪೊಲೀಸರು ಅವರನ್ನು ಕರೆಸಿದ್ದರು. ಇದರಿಂದಾಗಿ ನೊಂದಿದ್ದ ಈ ಇಬ್ಬರು ಮಹಿಳೆಯರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿ, ಗ್ರೀಷ್ಮಾ ಅವರ ಸ್ನೇಹಿತನನ್ನು ಪೊಲೀಸರು ಪ್ರಶ್ನಿಸಿದ್ದು, ರೇಷ್ಮಾಳೊಂದಿಗೆ ಫ್ರ್ಯಾಂಕ್ ಮಾಡಲು ತಾನು ಮತ್ತು ಆರ್ಯ ಸೇರಿ ಆನಂದು ಎನ್ನುವ ಹೆಸರಿನ ಫೇಸ್‌ಬುಕ್ ಖಾತೆಯನ್ನು ರಚಿಸಿರುವುದಾಗಿ ತಿಳಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೂಡ ಪ್ರ್ಯಾಂಕ್‌ ಬಗ್ಗೆ ತನ್ನ ಅತ್ತೆಗೆ ಹೇಳಿದ್ದಳು ಎನ್ನಲಾಗಿದೆ.

    ಸದ್ಯ, ಕೋವಿಡ್-19 ಪಾಸಿಟಿವ್ ಆಗಿದ್ದ ರೇಷ್ಮಾ ಅವರು ಕ್ವಾರಂಟೈನ್ ಕೇಂದ್ರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *