LATEST NEWS
ಫೇಸ್ ಬುಕ್ ಪೋಸ್ಟ್ ಪ್ರಕರಣ ಮಧ್ಯಪ್ರವೇಶಿಸಲು ಸಚಿವ ಖಾದರ್ ಗೆ ಮನವಿ

ಫೇಸ್ ಬುಕ್ ಪೋಸ್ಟ್ ಪ್ರಕರಣ ಮಧ್ಯಪ್ರವೇಶಿಸಲು ಸಚಿವ ಖಾದರ್ ಗೆ ಮನವಿ
ಮಂಗಳೂರು ಸೆಪ್ಟೆಂಬರ್ 12: ಸಾಮಾಜಿಕ ಜಾಲತಾಣದಲ್ಲಿ ಕೇರಳ ಪ್ರವಾಹಕ್ಕೆ ಸಂಬಂಧಿಸಿದಂತೆ ಬರಹ ಪ್ರಕಟಿಸಿದ್ದಕ್ಕೆ ಇತ್ತೀಚೆಗೆ ಬಂಧಿತರಾಗಿದ್ದ ಅಶ್ರಫ್ ಎಂ. ಸಾಲೆತ್ತೂರು ತನಗೆ ನ್ಯಾಯ ಒದಗಿಸುವಂತೆ ಕೋರಿ ಸಚಿವ ಯು.ಟಿ. ಖಾದರ್ ಗೆ ಮನವಿ ಸಲ್ಲಿಸಿದ್ದಾರೆ.
ನಾನು ಫೇಸ್ ಬುಕ್‌ನಲ್ಲಿ ಮೂಢನಂಬಿಕೆಯನ್ನು ಪ್ರಶ್ನಿಸುವ ಬರಹವನ್ನಷ್ಟೇ ಹಾಕಿದ್ದೆ. ಅದನ್ನು ತಪ್ಪಾಗಿ ಬಿಂಬಿಸಿ ನನ್ನ ವಿರುದ್ಧ ಬಂದರು ಠಾಣೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಕಾನೂನಿಗೆ ವಿರುದ್ಧವಲ್ಲದ ಪೋಸ್ಟ್ ಇದಾಗಿದ್ದರೂ ಪೊಲೀಸರು ತನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಸ್ವಯಂ ಪ್ರಕರಣ ದಾಖಲಿಸಿ ಸೆಕ್ಷನ್ 153, 505, 507 ನಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಸಿಸಿಬಿ ಪೊಲೀಸರು ತನ್ನನ್ನು ಠಾಣೆಯಲ್ಲಿ ಕೂಡಿ ಹಾಕಿದ್ದರು. ನಂತರ ನ್ಯಾಯಾಲಯದಲ್ಲಿ ಸತ್ಯ ಹೇಳಬಾರದು ಎಂದು ಬೆದರಿಸಲಾಯಿತು ಎಂದವರು ಮನವಿಯಲ್ಲಿ ಆರೋಪಿಸಿದ್ದಾರೆ.
ನನಗೆ ಅನ್ಯಾಯವಾಗಿದೆ. ಭವಿಷ್ಯದಲ್ಲಿ ಅಧ್ಯಾಪಕನಾಗುವ ಸಿದ್ಧತೆಯಲ್ಲಿದ್ದ ನಾನು ಈಗ ಅನ್ಯಾಯವಾಗಿ ಕ್ರಿಮಿನಲ್ ಆಗುವಂತಾಗಿದೆ. ನಾನು ಈಗ ಮಾನಸಿಕವಾಗಿ ಜರ್ಜರಿತನಾಗಿದ್ದು, ನನ್ನ ಭವಿಷ್ಯ ಡೋಲಾಯಮಾನವಾಗಿದೆ. ಈ ಬಗ್ಗೆ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.