Connect with us

    DAKSHINA KANNADA

    ಫೇಸ್ ಬುಕ್ ನಕಲಿ ಖಾತೆ ಸೃಷ್ಟಿ ; ಆರೋಪಿಯ ಬಂಧನ

    ಮಂಗಳೂರು, ಸೆಪ್ಟೆಂಬರ್ 12 :ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ, ಅಸಭ್ಯ ಚಿತ್ರಗಳನ್ನು ಮತ್ತು ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದ ಅರೋಪಿಯನ್ನು ಕಂಕನಾಡಿ ನಗರ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ರವಿನಾಯ್ಕ್ ಬಂಧಿಸಿದ್ದಾರೆ. ಬಂಧಿತನನ್ನು ಚತ್ತೀಸ್ ಘಡದ ತೋರಾನ್ ಲಾಲ್ ರಾವಟೆ ಎಂದು ಗುರುತ್ತಿಸಲಾಗಿದೆ. 23 ವರ್ಷದ ಈತ ಮಂಗಳೂರಿನ ಯೆಯ್ಯಾಡಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಫೇಸ್ ಬುಕ್ ನಲ್ಲಿ ನಕಲಿ ಖಾತೆ  ತೆರೆದು ಅದರಲ್ಲಿ ಅದರಲ್ಲಿ ಅನಾಮಧೇಯ ವ್ಯಕ್ತಿಗಳ ಭಾವ ಚಿತ್ರಗಳನ್ನು ಮತ್ತು ಅಶ್ಲೀಲ ಸಂದೇಶಗಳನ್ನು ಹಾಕುವ ಕುಕೃತ್ಯಗಳನ್ನು ಮಾಡುತ್ತಿದ್ದ ಎಂದು ಪೋಲಿಸರು ತಿಳಿಸಿದ್ದು, ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *