Connect with us

LATEST NEWS

ಕೇರಳಕ್ಕೆ ಬಂದು 6 ದಿನವಾದರು ಇನ್ನೂ ಕದಲದ ವಿಶ್ವದ ದುಬಾರಿ ಯುದ್ಧ ವಿಮಾನ F-35B

ತಿರುವನಂತಪುರಂ ಎಪ್ರಿಲ್ 20: ಬ್ರಿಟನ್‌ನ ರಾಯಲ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ F-35B ಯುದ್ಧ ವಿಮಾನ ನಾಲ್ಕು ದಿನಗಳ ಹಿಂದೆ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.


ವಿಶ್ವದ ಅತ್ಯಂತ ದುಬಾರಿ ಹಾಗೂ ಸುಧಾರಿತ ಯುದ್ದ ವಿಮಾನಗಳಲ್ಲಿ ಒಂದಾಗಿರುವ F-35B ಯುದ್ಧ ವಿಮಾನ ಬೆಲೆಯ ಸುಮಾರು 924 ಕೋಟಿ ರೂಪಾಯಿ. ಇದೀಗ ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಪಾರ್ಕಿಂಗ್ ಮಾಡಲಾಗಿದೆ.


ತುರ್ತು ಭೂಸ್ಪರ್ಶವಾಗಿ ನಾಲ್ಕು ದಿನಗಳು ಕಳೆದರೂ, ಈ ದುಬಾರಿ ಯುದ್ಧ ವಿಮಾನ ಇನ್ನೂ ತಿರುವನಂತಪುರಂನಲ್ಲೇ ನೆಲೆ ನಿಂತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಳಂಬಕ್ಕೆ ತಾಂತ್ರಿಕ ದೋಷವೇ ಕಾರಣವೇ? ಅಥವಾ ಬ್ರಿಟನ್ ತನ್ನ ಯುದ್ಧ ವಿಮಾನವನ್ನು ವಾಪಸ್ ಕರೆಸಿಕೊಳ್ಳದಿರಲು ಬೇರೆ ಯಾವುದಾದರೂ ಕಾರ್ಯತಂತ್ರದ ಕಾರಣಗಳಿವೆಯೇ ಎಂಬ ಕುತೂಹಲ ಮೂಡಿದೆ.
ಈ ನಡುವೆ ಭಾರತದ ಸಹಾಯವನ್ನು ಬ್ರಿಟನ್‌ನ ರಾಯಲ್ ನೌಕಾಪಡೆಗೆ ನಿರಾಕರಿಸಿದೆ ಎಂದು ವರದಿಯಾಗಿದೆ. ಭಾರತೀಯ ವಾಯುಪಡೆಯು ತಮ್ಮ ಹ್ಯಾಂಗರ್ ಗೆ ಸ್ಥಳಾಂತರಿ ಅಲ್ಲಿ ರಿಪೇರಿಗೆ ತಿಳಿಸಿದರೂ ಕೂಡ ಬ್ರಿಟನ್‌ನ ರಾಯಲ್ ನೌಕಾಪಡೆಗೆ ಒಪ್ಪಿಲ್ಲ ಎಂದರು ವರದಿಯಾಗಿದೆ.

ಭಾರತೀಯ ವಾಯುಪ್ರದೇಶದ ಹೊರಗೆ ದಿನನಿತ್ಯದ ಹಾರಾಟದಲ್ಲಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನಲೆ ವಿಮಾನವನ್ನು ಕೂಡಲೇ ಕೇರಳ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *