Connect with us

    DAKSHINA KANNADA

    ವಾಹನಗಳಲ್ಲಿ ಕಣ್ಣು ಕುಕ್ಕುವ ಹೈ-ಬೀಮ್ ಹೆಡ್‍ಲೈಟ್‍, 4 ದಿನಗಳಲ್ಲಿ 5 ಸಾವಿರ ಪ್ರಕರಣ ದಾಖಲು..!

    ಬೆಂಗಳೂರು : ಕಣ್ಣು ಕುಕ್ಕುವ ಹೈ-ಬೀಮ್ ಹೆಡ್‍ಲೈಟ್‍ಗಳನ್ನು ಬಳಸಿ ವಾಹನ ಚಲಾಯಿಸುವ ಚಾಲಕರ ವಿರುದ್ದ ರಾಜ್ಯ ಪೊಲೀಸರು ಸಮರ ಸಾರಿದ್ದಾರೆ. ಕಳೆದ 4 ದಿನಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 5 ಸಾವಿರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಣ್ಣು ಕುಕ್ಕುವ ರೀತಿಯ ಎಲ್‍ಇಡಿ ದೀಪ ಬಳಸುವುದರಿಂದ ವಾಹನ ಅಪಘಾತಗಳು ಹೆಚ್ಚಾಗುತ್ತಿದೆ ಎಂಬುವುದನ್ನು ಮನಗಂಡ ಪೊಲೀಸ್ ಇಲಾಖೆ ಇದೀಗ ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಅಖಾಡಕ್ಕಿಳಿದಿದೆ. ಪ್ರಕಾಶಮನವಾದ ಹೆಡ್ ಲೈಟ್ ಬಳಸಿ ವಾಹನ ಚಲಾಯಿಸಿದ ಲಾರಿ, ಟ್ರಕ್, ಬಸ್, ಆಟೋ ಸೇರಿದಂತೆ ಇನ್ನಿತರ ವಾಹನಗಳ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ರಸ್ತೆ ಹಾಗೂ ಸುರಕ್ಷತೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ವಾಹನದಲ್ಲಿನ ಹೆಚ್ಚು ಬೆಳಕು ಹೊರಸೂಸುವ(ಹೈಬೀಮ್) ಎಲ್.ಇ.ಡಿ. ಹೆಡ್‍ಲೈಟ್‍ಗಳು ಅಪಘಾತಕ್ಕೆ ಕಾರಣವಾಗಬಹುದು. ಇಂತಹ ಮಾರ್ಪಡಿಸಿದ ಹೆಡ್‍ಲೈಟ್‍ಗಳನ್ನು ಬಳಸುವವರ ವಿರುದ್ದ ರಾಜ್ಯದಾದ್ಯಂತ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ 2,153, ಮೈಸೂರಿನಲ್ಲಿ 302, ತುಮಕೂರು 237, ಉತ್ತರ ಕನ್ನಡ 236, ರಾಯಚೂರು 260, ವಿಜಯನಗರ 182, ಧಾರವಾಡ 144 ಸೇರಿದಂತೆ ಜುಲೈ 4ರ ಅಂತ್ಯಕ್ಕೆ ಐದು ಸಾವಿರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ 500 ರೂ., ಎರಡನೇ ಬಾರಿ ಉಲ್ಲಂಘಿಸಿದರೆ 1 ಸಾವಿರ ರೂ ದಂಡ ವಿಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್‍ಇಡಿ ದೀಪ ಬಳಕೆಯಿಂದಾಗಿ ಅಪಘಾತ ಹೆಚ್ಚಾಗಿದೆ. ಪ್ರಖರ ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವ ಹಾಗೆ ಹೈ ಬೀಮ್ ಹೆಡ್‍ಲೈಟ್ ಬಳಸದೆ ಕೇಂದ್ರ ಮೋಟಾರ್ ಕಾಯ್ದೆಯ ಮಾರ್ಗಸೂಚಿ ಅನುಸರಿಸಬೇಕು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *