Connect with us

    UDUPI

    ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕಣ್ಣು ಸಂಗ್ರಹಣಾ ಕೇಂದ್ರ

    ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕಣ್ಣು ಸಂಗ್ರಹಣಾ ಕೇಂದ್ರ

    ಉಡುಪಿ ಜನವರಿ 21: ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕಣ್ಣು ಸಂಗ್ರಹಣಾ ಕೇಂದ್ರ ಮತ್ತು ಅಂಧತ್ವ ನಿವಾರಣಾ ಉಪಕರಣಗಳ ಕೇಂದ್ರ ತೆರೆಯುವ ಕುರಿತಂತೆ ಆರೋಗ್ಯ ಇಲಾಖೆಯ ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗೆ ಚಿಂತನೆ ನಡೆಸಲಗುತ್ತಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅವರು ತಿಳಿಸಿದ್ದಾರೆ.

    ಅವರು ಭಾನುವಾರ, ಉಡುಪಿಯ ರೆಡ್ ಕ್ರಾಸ್ ಭವನದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ, ರವರ ಸಂಯುಕ್ತಾಶ್ರಯದಲ್ಲಿ ಅರಿವಿನ ಸಿಂಚನ ಯೋಜನೆಯಡಿಯಲ್ಲಿ ಬ್ರೇಲ್ ತರಬೇತಿ ಮತ್ತು ಚಲನವಲನಗಳ ತರಬೇತಿ ಉದ್ಘಾಟನೆ ಹಾಗೂ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ ಪ್ರತಿದಿನ 67400 ಮಂದಿ ಜನಿಸುತ್ತಿದ್ದು, 51000 ಮಂದಿ ವಿವಿಧ ಕಾರಣಗಳಿಂದ ಮರಣ ಹೊಂದುತ್ತಿದ್ದಾರೆ, ದೇಶದಲ್ಲಿ 38 ಲಕ್ಷ ಮಂದಿ ಅಂಧತ್ವದಿಂದ ಬಳಲುತ್ತಿದ್ದು, ಅವರಿಗೆ ದಾನಿಗಳ ಕಣ್ಣುಗಳ ಅವಶ್ಯಕತೆಯಿದೆ, ವ್ಯಕ್ತಿ ಮರಣ ಹೊಂದಿದ 4-6 ಗಂಟೆಯ ಒಳಗೆ ಅತನ ಕಣ್ಣುಗಳನ್ನು ದಾನ ಮಾಡಬಹುದಾಗಿದ್ದು , ನೇತ್ರದಾನಕ್ಕೆ ಹೆಸರು ನೊಂದಾಯಿದ್ದರೂ ಸಹ ಮೃತನ ಮನೆಯವರು ಮಾಹಿತಿ ನೀಡದ ಕಾರಣ , ನೇತ್ರದಾನ ಉದ್ದೇಶ ವಿಫಲವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ದ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಸಂಗ್ರಹಣಾ ಕೇಂದ್ರ ಮತ್ತು ಅಂಧತ್ವ ನಿವಾರಣಾ ಉಪಕರಣಗಳ ಕೇಂದ್ರ ತೆರೆಯುವ ಕುರಿತಂತೆ ಚಿಂತನೆ ನಡೆದಿದೆ ಎಂದು ಬಸ್ರೂರು ರಾಜೀವ ಶೆಟ್ಟಿ ತಿಳಿಸಿದರು.

    ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಈಗಾಗಲೇ ಐ ಬ್ಯಾಂಕ್ ತೆರೆಯಲಾಗಿದೆ, 3685 ಮಂದಿ ಹೆಸರು ನೊಂದಾಯಿಸಿದ್ದಾರೆ, ನೇತ್ರದಾನದ ಮೂಲಕ ವ್ಯಕ್ತಿ ಮರಣದ ನಂತರೂ ಸಹ ಇನ್ನೊಬ್ಬರ ಮೂಲಕ ಬದುಕು ಕಾಣಲು ಸಾಧ್ಯ ಎಂದು ಹೇಳಿದರು.
    ಭಾರತೀಯ ರೆಡ್ ಕ್ರಾಸ್ ವತಿಯಿಂದ 6-14 ವರ್ಷದೊಳಗಿನ 8663 ಮಂದಿಗೆ 18 ಕೋಟಿ ವೆಚ್ಚದಲ್ಲಿ ಶ್ರವಣ ಸಾಧನಾ ಉಪಕರಣ ವಿತರಿಸಿದ್ದು, ಉಡುಪಿ ಜಿಲ್ಲೆಯಲ್ಲಿ 600 ಮಂದಿ ಈ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply