LATEST NEWS
ನನ್ನ ಮನೆಯ ವಿಳಾಸ ಬಹಿರಂಗಗೊಳಿಸಬೇಡಿ – ನೂಪುರ್ ಶರ್ಮಾ

ನವದೆಹಲಿ ಜೂನ್ 05: ಟಿವಿ ಚಾನೆಲ್ ಒಂದರ ಚರ್ಚಾ ಸಂದರ್ಭ ಪ್ರವಾದಿ ಮಹಮ್ಮದ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಇದೀಗ ನೂಪುರ್ ಶರ್ಮಾ ಅವರು ತಮ್ಮ ವಿಳಾಸವನ್ನು ಬಹಿರಂಗ ಪಡಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಕುಟುಂಬದ ಭದ್ರತೆಗೆ ಬೆದರಿಕೆ ಇರುವುದಾಗಿ ನೂಪುರ್ ಶರ್ಮಾ ಟ್ವೀಟ್ ಮಾಡಿದ್ದಾರೆ. ‘ನನ್ನ ವಿಳಾಸವನ್ನು ಎಲ್ಲಿಯೂ ಪ್ರಸಾರ ಮಾಡದಂತೆ ಎಲ್ಲಾ ಮಾಧ್ಯಮಗಳಿಗೆ ಮತ್ತು ಪ್ರತಿಯೊಬ್ಬರಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬದ ಭದ್ರತೆಗೆ ಬೆದರಿಕೆಯಿದೆ’ ಎಂದು ಟ್ವೀಟ್‌ನಲ್ಲಿ ನೂಪುರ್ ಮನವಿ ಮಾಡಿದ್ದಾರೆ. ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ನೂಪುರ್ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
