LATEST NEWS
ಜೂನ್ 2 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ
ಜೂನ್ 2 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ
ಮಂಗಳೂರು ಮೇ 24: ಕರ್ನಾಟಕ ರಾಜ್ಯಕ್ಕೆ ಈ ಬಾರಿ ಮೂರು ದಿನ ಮೊದಲೇ ಜೂನ್ 2 ರಂದು ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿಂದೆ ಹವಾಮಾನ ಇಲಾಖೆ ಜೂನ್ 5 ರಂದು ಮಾನ್ಸೂನ್ ಮಾರುತಗಳು ರಾಜ್ಯ ಕರಾವಳಿಯನ್ನು ಪ್ರವೇಶ ಮಾಡಲಿದೆ ಎಂದು ತಿಳಿಸಿತ್ತು. ಆದರೆ ಇತ್ತೀಚೆಗಿನ ವರದಿಗಳ ಪ್ರಕಾರ ಮುಂಗಾರು ಮಾರುತ ಮೂರು ದಿನಗಳ ಮೊದಲೇ ರಾಜ್ಯ ಕರಾವಳಿ ಪ್ರವೇಶ ಮಾಡಲಿದೆ.
ನೈಋತ್ಯ ಮಾನ್ಸೂನ್ ಈ ಬಾರಿ ಮೇ 29 ರಂದು ಅಥವಾ ಮೇ 30ರಂದು ಕೇರಳ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 2ರಂದು ಪ್ರವೇಶ ಮಾಡಲಿವೆ. ಅಂತೆಯೇ ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣದ ಒಳನಾಡಿನಲ್ಲಿ ಮತ್ತೆ ಮಳೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇ 26 ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು ಪ್ರಸಕ್ತ ಸಾಲಿನಲ್ಲಿ ಮಾನ್ಸೂನ್ ಗೂ ಮುನ್ನ ಅತ್ಯುತ್ತಮ ಮಳೆಯಾಗಿದ್ದು, ಇದು ಈ ವರೆಗೂ ದಾಖಲಾದ ಅತ್ಯುತ್ತಮ ಮಾನ್ಸೂನ್ ಪೂರ್ವ ಮಳೆ ಎಂದು ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿವೀಕ್ಷಣಾ ಕೇಂದ್ರ ನೀಡಿರುವ ಮಾಹಿತಿಯನ್ವಯ ಮೇ 23ರವರೆಗೂ ರಾಜ್ಯದಲ್ಲಿ 101.6 ಮಿ.ಮೀ ಮಳೆಯಾಗಿದೆ. ಮಾರ್ಚ್ 1 ರಿಂದ ಮೇ 23 ರವರೆಗೆ 101.6 ಮಳೆಯಾಗಿದೆ. ಮಾರ್ಚ್ 23ರಿಂದ ಇಲ್ಲಿಯವರೆಗೂ 140.87 ಮಿ,ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.