LATEST NEWS
ಪ್ರಯಾಣಿಕರನ್ನು ಕಾಯಿಸಿದ ಇಂಡಿಗೋ ಸಂಸ್ಥೆ ಸಿಬ್ಬಂದಿ ವಿರುದ್ದ ಹರಿಹಾಯ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ
ಮಂಗಳೂರು ಜನವರಿ 15: ಮುಂಬೈನಿಂದ ಮಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನ ರದ್ದಾಗಿ ಪ್ರಯಾಣಿಕರಿಗೆ ಯಾವುದೇ ರೀತಿಯ ಬದಲಿ ವಿಮಾನ ಕಲ್ಪಿಸದ ಇಂಡಿಗೋ ವಿಮಾನ ಸಂಸ್ಥೆ ಸಿಬ್ಬಂದಿಗಳ ವಿರುದ್ದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈಯಿಂದ ಮಂಗಳೂರಿಗೆ 10:00 ಘಂಟೆಗೆ ಬಿಡಬೇಕಿದ್ದ ಇಂಡಿಗೋ 6F 6674 ವಿಮಾನವು ರದ್ದುಗೊಂಡಿತ್ತು. ಈ ವೇಳೆ ಸಂಜೆಯಾದರೂ ವಿಮಾನಯಾನ ಸಂಸ್ಥೆ ಬದಲಿ ವ್ಯವಸ್ಥೆ ಕಲ್ಪಿಸದೇ ಪ್ರಯಾಣಿಕರನ್ನು ಕಾಯಿಸಿದೆ. ವಿಮಾನಯಾನ ಸಂಸ್ಥೆಯ ವಿರುದ್ಧ ಇಂಡಿಗೋ ವಿಮಾನ ಪ್ರಯಾಣಿಕರು ಆಕ್ರೋಶಗೊಂಡಿದ್ದು ಕತಾರ್, ಹಾಗೂ ದಮ್ಮಾಮ್ ನಿಂದ ಆಗಮಿಸಿದ ಪ್ರಯಾಣಿಕರು ಪುಟ್ಟ ಮಕ್ಕಳ ಸಹಿತ ಸುಮಾರು ಇಪ್ಪತ್ತಾರು ಘಂಟೆಗಳ ಕಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದರೂ ಯಾವುದೇ ಬದಲಿ ವ್ಯವಸ್ಥೆಯನ್ನು ಕೂಡ ಮಾಡದೆ ಅನ್ನ ,ನೀರಿನ ವ್ಯವಸ್ಥೆಯನ್ನು ಕೂಡ ಮಾಡದ ವಿಮಾನ ನಿಲ್ದಾಣ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ನಡೆಯಿತು, ಕತಾರ್ ನಿಂದ ಹೈದರಾಬಾದ್ ಮೂಲಕ ಮಂಗಳೂರು ತೆರಳಬೇಕಿದ್ದ ಪ್ರಯಾಣಿಕರನ್ನು ಮುಂಬೈಗೆ ತಂದು ಇಳಿಸಿದ್ದು, ಮುಂಬೈಯಿಯಲ್ಲೂ ಇದೇ ಪರಿಸ್ಥಿತಿ ಎದುರಾದಾಗ ಯಾವುದೇ ಬದಲಿ ವಿಮಾನದ ವ್ಯವಸ್ಥೆ ಮಾಡದೇ ಇದ್ದಾಗ ಪ್ರಯಾಣಿಕರ ತಾಳ್ಮೆಯ ಕಟ್ಟೆಯೊಡೆದಿದ್ದು ಈ ಸಂಧರ್ಭದಲ್ಲಿ ವಿಮಾನ ಪ್ರಯಾಣಿಕರಿಗೆ ಆಸರೆಯಾದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಪ್ರಯಾಣಿಕರ ಸಮಸ್ಯೆಗೆ ಧ್ವನಿಗೂಡಿಸಿದ್ದು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಬದಲಿ ವ್ಯವಸ್ಥೆಯನ್ನು ಮಾಡುವಂತೆ ಏರು ಧ್ವನಿಯಲ್ಲೆ ಅಬ್ಬರಿಸಿದ್ದಾರೆ.
ಮಾಜಿ ಶಾಸಕರ ಆಕ್ರೋಶಕ್ಕೆ ಮಣಿದ ಇಂಡಿಗೋ ವಿಮಾನ ಸಂಸ್ಥೆಯವರು ಬದಲಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದ್ದು ಸೇರಿದ್ದ ಇಂಡಿಗೋ ವಿಮಾನದಲ್ಲಿ ಮಂಗಳೂರು ಪ್ರಯಾಣಿಸಬೇಕಿದ್ದ ಪ್ರಯಾಣಿಕರು ತಮ್ಮ ಬೆಂಗವಲಾಗಿ ನಿಂತು ಅಧಿಕಾರಿಗಳೊಂದಿಗೆ ಮಾತನಾಡಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಲು ವಿಶೇಷ ವಿಮಾನವನ್ನು ಕಲ್ಪಿಸಲು ಸಹಾಯ ಮಾಡಿದ ಮಾಜಿ ಶಾಸಕ ಮೊಯಿದ್ದಿನ್ ಬಾವಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.