LATEST NEWS
ಧರ್ಮಸ್ಧಳದ ಶಾಂತಿವನಕ್ಕೆ ಶಿಫ್ಟ್ ಆದ ರಾಜ್ಯ ರಾಜಕೀಯ

ಧರ್ಮಸ್ಧಳದ ಶಾಂತಿವನಕ್ಕೆ ಶಿಫ್ಟ್ ಆದ ರಾಜ್ಯ ರಾಜಕೀಯ
ಮಂಗಳೂರು ಜೂನ್ 24 : ಧರ್ಮಸ್ಥಳದ ಶಾಂತಿವನ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ದಲ್ಲಿ ಪ್ರಕೃತಿ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಏಕಾಏಕಿ ರಾಜಕೀಯವಾಗಿ ಚುರುಕಾಗಿದ್ದಾರೆ.
ನೂತನ ಮೈತ್ರಿ ಸರಕಾರದ ಬಜೆಟ್ ಮಂಡಣೆಯ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಯಲದಲ್ಲಿ ನಡೆಯುತ್ತಿರುವ ಈ ಬೆಳವಳಣಿಗೆಗಳ ನಡುವೆ ಒಬ್ಬರ ಹಿಂದೆ ಮತ್ತೋಬ್ಬರಂತೆ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿದ್ದು ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದೆ.

ಕಾಂಗ್ರೆಸ್ ಮುಖಂಡರೊಂದಿಗೆ ಸಭೆ , ಚರ್ಚೆ ನಡೆಸುತ್ತಿರುವ ಸಿದ್ದರಾಮಯ್ಯ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಂತಿ ವನ ಪ್ರಕೃತಿಕ ಚಿಕಿತ್ಸಾ ಕೇಂದ್ರ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿದೆ.
ಉಪಮುಖ್ಯಮಂತ್ರಿ ಡಾ ,.ಜಿ ಪರವಾಶ್ವರ್ ಶ್ರೀ ಕ್ಷೇತ್ರ ಧರ್ಮಸ್ತಳಕ್ಕೆ ಭೇಟಿ ನೀಡಿದರು. ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಿ ಪರಮೇಶ್ವರ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪರಮೇಶ್ವರ್ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಧರ್ಮಸ್ಥಳದ ಶಾಂತಿವನದಲ್ಲಿ ಡಿಸಿಎಂ ಪರಮೇಶ್ವರ್ ಹಾಗು ಸಿದ್ದರಾಮಯ್ಯ ರಹಸ್ಯ ಮಾತುಕತೆ ನಡೆಸಿರುವುದು ಈಗ ಮಹತ್ವ ಪಡೆದಿದೆ. ಪ್ರಕೃತಿ ಚಿಕಿತ್ಸಾಲಯದ ಕೊಠಡಿಯಲ್ಲಿ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.ಒಂದು ಗಂಟೆ ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಇತರ ಯಾವುದೇ ನಾಯಕರಿಗೆ ಕೊಠಡಿ ಪ್ರವೇಶ ಇರಲಿಲ್ಲ.
ಚರ್ಚೆ ಸಂದರ್ಭದಲ್ಲಿ ಸಾಲಮನ್ನಾ, ನಿಗಮ ಮಂಡಳಿ ವಿಚಾರದಲ್ಲಿ ನಿರ್ಣಾಯಕ ಮಾತುಕತೆ ನಡೆದಿದೆ , ಅದಲ್ಲದೇ ಕೆಲ ಮಹತ್ವದ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.