LATEST NEWS
ಡಿಕೆಶಿ ಸಿಬಿಐ ಕೇಸ್ ವಾಪಾಸ್ ಗೆ ಕಳೆದ ಬಾರಿ ಯಡಿಯೂರಪ್ಪ ಮೌಖಿಕ ಆದೇಶ ಕೊಟ್ಟಿದ್ರು – ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್
ಮಂಗಳೂರು ನವೆಂಬರ್ 24: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ಪ್ರತಿಕ್ರಿಯೆ ನೀಡಿದ್ದು, ಅಡ್ವೊಕೇಟ್ ಜನರಲ್ ಗೆ ಕಳೆದ ಬಾರಿ ಯಡಿಯೂರಪ್ಪ ಮೌಖಿಕ ಆದೇಶ ಕೊಟ್ಟಿದ್ರು, ಆದರೆ ಮೌಖಿಕ ಆದೇಶ ಕೊಡೋದು ತಪ್ಪು ಅನ್ನೋದು ಆಗಿನ ಎಜಿ ಮತ್ತು ಈಗಿನ ಎಜಿ ಶಶಿಕಿರಣ್ ಶೆಟ್ಟಿ ಅಭಿಪ್ರಾಯ ಈ ಹಿನ್ನಲೆ ಈಗ ಕೊಟ್ಟ ಅನುಮತಿ ವಾಪಾಸ್ ಪಡೆಯಲಾಗಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಂದಿನ ಬಿಜೆಪಿ ಯಡಿಯೂರಪ್ಪ ಸರಕಾರ ಡಿಕೆಶಿ ಮೇಲಿನ ಸಿಬಿಐ ಕೇಸ್ ಕೈ ಬಿಡಲು ಮೌಖಿಕ ಆದೇಶ ಕೊಟ್ಟಿದ್ದರು. ಆದರೆ ಆಗಿನ ಸರ್ಕಾರ ಮಾಡಿರೋದು ತಪ್ಪು ಅಂತ ಎಜಿ ವರದಿ ಕೊಟ್ಟಿದ್ದಾರೆ. ಹೀಗಾಗಿ ಕ್ಯಾಬಿನೆಟ್ ಗೂ ಅದು ತಪ್ಪು ಅಂತ ಅನಿಸಿ ವಾಪಾಸ್ ತೆಗೊಂಡಿದೆ. ಬಿಜೆಪಿಯವರು ಪ್ರಾಮಾಣಿಕರಾಗಿದ್ರೆ ಎಜಿ ಕೇಳಿ ಕೊಡಬೇಕಿತ್ತು. ಎಜಿ ಅಭಿಪ್ರಾಯ ಕೊಡೋ ಮೊದಲೇ ಆಗಿನ ಸಿಎಂ ಸಿಬಿಐ ಕೊಟ್ಟಿದ್ದು ತಪ್ಪಲ್ವಾ? ಅವರು ಪ್ರಾಮಾಣಿಕರಾಗಿದ್ರೆ ಎಜಿ ಕೇಳಿ ಕೊಡಬೇಕಿತ್ತು. ನಮ್ಮ ಪ್ರಾಮಾಣಿಕತೆ ಪ್ರಶ್ನೆ ಮಾಡೋ ಇವರು ಎಜಿ ಸಲಹೆ ಕೇಳಬೇಕಿತ್ತು ಎಂದರು.
ಕಾಂಗ್ರೆಸ್ ಗೆ ಯಾರು ಬರ್ತಾರೆ, ಹೋಗ್ತಾರೆ ಅಂತ ನನಗೆ ಗೊತ್ತಿಲ್ಲ, ವಿಜಯೇಂದ್ರ ಅಥವಾ ಯಾವುದೇ ವ್ಯಕ್ತಿಯಿಂದ ಪಕ್ಷದಲ್ಲಿ ಬದಲಾವಣೆ ಆಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರೋರ ಸಂಖ್ಯೆ ಹೆಚ್ಚಾಗಲಿ, ಸರ್ಕಾರ ಸರಿಯಿದೆ. ಸೋಮಣ್ಣ ವಿಚಾರದಲ್ಲಿ ಮಾತುಕತೆ ಆಗ್ತಿದೆ, ಏನಾಗಿದೆ ಗೊತ್ತಿಲ್ಲ. ಜಾತಿ ಗಣತಿ ಅನ್ನೋದು ಅವರ ಜಾತಿ ಎತ್ತಿ ತೋರಿಸೋ ಉದ್ದೇಶ ಅಲ್ಲ, ಅವರ ಜಾತಿಯ ಆರ್ಥಿಕ ಸ್ಥಿತಿಗತಿ ತಿಳಿಯೋ ಉದ್ದೇಶ, ಅವರನ್ನು ಮೇಲೆ ಎತ್ತೋದೇ ಸರ್ಕಾರದ ಪ್ರಮುಖ ಉದ್ದೇಶ, ಸಮಾಜದಲ್ಲಿ ಮೇಲೆ ಎತ್ತೋ ಉದ್ದೇಶ ಜಾತಿ ಗಣತಿಯದ್ದು. ಜಾತಿ ಗಣತಿ ವರದಿ ತೆಗೊಂಡು ಸಾಧಕ ಬಾಧಕ ನೋಡಿ ಸರ್ಕಾರ ಅನುಮೋದನೆ ಮಾಡಲಿದೆ ಎಂದರು.