LATEST NEWS
ಹೃದಯಾಘಾತದಿಂದ ಸಾವನಪ್ಪಿದ 32 ವರ್ಷದ ಯುವ ಮಹಿಳಾ ಉದ್ಯಮಿ ಪಂಖೂರಿ ಶ್ರೀ ವಾಸ್ತವ

ನವದೆಹಲಿ ಡಿಸೆಂಬರ್ 29: 32 ವರ್ಷದ ದೇಶದ ಉದಯೋನ್ಮುಖ ಮಹಿಳಾ ಉದ್ಯಮಿ ಪಂಖೂರಿ ಶ್ರೀವಾಸ್ತವ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಝಾನ್ಸಿ ಮೂಲದ ಪಂಖೂರಿ ರಾಜೀವ್ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 32 ವರ್ಷದ ಹರೆಯಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ್ದರು.

ಪಂಖೂರಿ ಅವರು 2016ರಲ್ಲಿ ಆನ್ಲೈನ್ ಜಾಹೀರಾತು ಕಂಪನಿ ಕ್ವಿಕರ್ ಪ್ರಾರಂಭ ಮಾಡಿದ್ದರು, ರೀಟೈಲ್ ಸ್ಟಾರ್ಟ್-ಅಪ್ ಗ್ರಾಬ್ ಹೌಸ್ ಸ್ಥಾಪಿಸಿದ್ದರು. ಭಾರತದ ಮಹಿಳೆಯರು ಲೈವ್ ಸ್ಟ್ರೀಮಿಂಗ್, ಚಾಟ್ ಮತ್ತು ಮೈಕ್ರೋ -ಕೋರ್ಸ್‌ಗಳ ಮೂಲಕ ಆನ್ಲೈನ್ ಶಾಪಿಂಗ್ ಮಾಡಲು ಪಂಖೂರಿ ಅವರ ಸಿಕ್ವೊಯಾ ಕ್ಯಾಪಿಟಲ್ ಬೆಂಬಲಿತ ಸಾಮಾಜಿಕ ತಾಣವನ್ನು ನಿರ್ಮಿಸಿದ್ದರು. ಈ ಮೂಲಕ ಹಲವಾರು ಮಹಿಳೆಯರ ಉನ್ನತಿಗಾಗಿ ಅವರು ಶ್ರಮಿಸುತ್ತಿದ್ದರು. ಇವರ ಅಗಲಿಕೆಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ