ಏರಿಕೆಯಲ್ಲಿ ಎಂಡೋಪಿಡೀತರ ಸಾವಿನ ಸಂಖ್ಯೆ
ಪುತ್ತೂರು ಫೆಬ್ರವರಿ 21: ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಂಡೋ ಪೀಡಿತ ಯುವಕನೋರ್ವ ಸಾವನಪ್ಪಿದ ಘಟನೆ ನಡೆದಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಾಲ್ತಾಡಿಯ ಬಂಬಿಲ ನಿವಾಸಿ ಹರೀಶ್ (24) ಸಾವಿಗೀಡಾದ ಎಂಡೋ ಪೀಡಿತ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ತೀವೃ ಅನಾರೋಗ್ಯಕ್ಕೆ ತುತ್ತಾಗಿ ಹರೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನಪ್ಪಿದ್ದಾರೆ.

ಈತನ ಚಿಕಿತ್ಸೆ ಗಾಗಿ ಈಗಾಗಲೇ ಯುವಕ ತಾಯಿ ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿದ್ದು , ಅವರ ಮನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನಲೆಯಲ್ಲಿ ಸರಕಾರ ಸಹಾಯದ ನಿರೀಕ್ಷೆಯಲ್ಲಿ ಕುಟುಂಬ ಇದೆ.
