LATEST NEWS
ಏರ್ ಟೆಲ್ ಹಾಗೂ ವೊಡಾಫೋನ್ ಬಳಿಕ ಜಿಯೋ ರಿಚಾರ್ಜ್ ಶೇಕಡ 21 ರಷ್ಟು ಏರಿಕೆ
ನವದೆಹಲಿ: ಈಗಾಗಲೇ ದರ ಏರಿಕೆ ಮಾಡಿರುವ ಎರ್ ಟೆಲ್ ಮತ್ತು ವೊಡಾಫೋನ್ ಸಾಲಿಗೆ ಇದೀಗ ಜಿಯೋ ಕೂಡ ದರ ಏರಿಕೆ ಮಾಡಲು ಮುಂದಾಗಿದ್ದು, ಡಿಸೆಂಬರ್ 1 ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ(ವಿ) ಈಗಾಗಲೇ ತಮ್ಮ ದರಗಳನ್ನು ಏರಿಸಿದ್ದು, ಇದೀಗ ಜಿಯೋ ಮುಂದಿನ ತಿಂಗಳಿನಿಂದ ತನ್ನ ಪ್ರಿಪೇಯ್ಡ್ ದರಗಳಲ್ಲಿ ಶೇಕಡಾ 21 ರಷ್ಟು ಹೆಚ್ಚಳ ಮಾಡುವುದಾಗಿ ಭಾನುವಾರ ಘೋಷಿಸಿದೆ. ದರ ಹೆಚ್ಚಳವು ಜಿಯೋ ಫೋನ್ ಯೋಜನೆ, ಅನಿಯಮಿತ ಯೋಜನೆಗಳು ಮತ್ತು ಡೇಟಾವನ್ನು ಒಳಗೊಂಡಿದ್ದು, ಶೇ. 19.6 ರಿಂದ ಶೇ. 21.3 ರಷ್ಟು ಹೆಚ್ಚಳ ಮಾಡಲಾಗಿದೆ.
ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಳೆದ ವಾರ ತನ್ನ ಪ್ರಿಪೇಯ್ಡ್ ದರಗಳನ್ನು ಶೇ.25 ರವರೆಗೆ ಹೆಚ್ಚಿಸಿದ್ದವು.