ಪತಗಾಳಿ, ಜೂನ್ 24: ಪ್ರಧಾನಿ ಶ್ರೀ ನರೇಂದ್ರಮೋದಿ ಅವರಿಂದ ಲೋಕಾರ್ಪಣೆಗೊಂಡ 77 ಅಡಿ ಎತ್ತರದ ಕಂಚಿನ ಶ್ರೀ ರಾಮ ಪ್ರತಿಮೆಯುಳ್ಳ ಪವಿತ್ರ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ, ಪರಾಭವ ನಾಮ ಸಂವತ್ಸರದ ನಿಜ ಜೇಷ್ಠ ಶುಕ್ಲ ದಶಮಿಯ ಶುಭಸಂದರ್ಭವಾದ ಬುಧವಾರದಂದು, ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರವಾದ “ಜೀವೋತ್ತಮ ವಿದ್ಯಾ ಪೀಠಂ” ಉದ್ಘಾಟನೆಗೊಂಡಿತು.
ಕ್ರಿ .ಶ. 1475 ರಲ್ಲಿ ಶ್ರೀ ಪಲಿಮಾರು ಮಠದ ಶ್ರೀ ರಾಮಚಂದ್ರತೀಥ ಶ್ರೀಪಾದಂಗಳವರಿಂದ ಸಂನಾ್ಯಸಾಶ್ರಮವನು ಸಿ್ವೕಕರಿಸಿದ ಶ್ರೀ ನಾರಾಯಣತೀಥ ಶಿ್ರೕಪಾದಂಗಳವರಿಂದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಸಾ್ಥಪನೆಯಾಯಿತು. ಸುಮಾರು 550 ವಷಗಳ ನಿರಂತರ ಗುರುಪರಂಪರೆಯ ಮೂಲಕ ಶಿ್ರೕಮಧಾ್ವಚಾಯರ ದೆ್ವೖತ ಸಿದಾ್ಧಂತವನು ಪೋಷಿಸಿ, ಪ್ರಸಾರ ಮಾಡುತಿ್ತರುವ ಈ ಮಠವು ಪ್ರಸು್ತತ ದೇಶಾದ್ಯಂತ 34 ಶಾಖಾ ಮಠಗಳನು ಹೊಂದಿದೆ.
ಮಠದ ಆರಾಧ್ಯ ದೇವರಾದ ಶಿ್ರೕ ರಾಮದೇವ ವೀರವಿಠ್ಠಲ ದೇವರ ಅನುಗ್ರಹ ಹಾಗೂ ಸವ ಗುರುಪರಂಪರೆಯ 23 ಯತಿಗಳ ಆಶೀವಾದದಿಂದ ವೈಷ್ಣವ ಸಂಪ್ರದಾಯದಂತೆ ಪ್ರತಿದಿನ ತಂತ್ರಸಾರೋಕ್ತ ತಿ್ರಕಾಲ ಪೂಜೆ ನಡೆಯುತಿ್ತದೆ. ಸಾಂಪ್ರದಾಯಿಕ ಗುರುಕುಲ ಪದ್ಧತಿಯ ಮೂಲಕ ವೇದ ಹಾಗೂ ಶಾಸ್ತ್ರಗಳ ಅಧ್ಯಯನವು ಶತಮಾನಗಳಿಂದ ನಿರಂತರವಾಗಿ ನಡೆಯುತಾ್ತ ಬಂದಿದೆ. ಮಠದ ೧೮ನೇ ಯತಿವಯರಾದ ಶಿ್ರೕಮದ್ ಪೂಣಪ್ರಜ್ಞತೀಥ ಶಿ್ರೕಪಾದಂಗಳವರು ವಿದಾ್ಯದಾನದ ಉದೆ್ದೕಶದಿಂದ ವಿಶೇಷ ಗುರುಕುಲವನು ಸಾ್ಥಪಿಸಿ ಸಮಾಜಕೆ ಅನೇಕ ವಿದಾ್ವಂಸರು ಹಾಗೂ ಪಂಡಿತರನು ನೀಡುವ ಮೂಲಕ ಸಮಾಜದ ಏಳಿಗೆಯಲಿ್ಲ ಮಹತ್ತರ ಸೇವೆ ಸಲಿ್ಲಸಿದ್ದರು.
1953 ರಲಿ್ಲ ಮಠದ 22 ನೇ ಯತಿವಯರಾದ ಶಿ್ರೕಮದ್ ದಾ್ವರಕಾನಾಥತೀಥ ಶ್ರೀಪಾದಂಗಳವರು ಗೋವಾದ ಡಿಚೋಲಿಯ ವಾ್ಯಸಾಶ್ರಮದಲಿ್ಲ ಪಾ್ರಚೀನ ಗುರುಕುಲ ಪದ್ಧತಿಯನು ಅನುಸರಿಸಿ “ಶಿ್ರೕ ಇಂದಿರಾಕಾಂತತೀಥ ಸಂಸ್ಕೃತ ಪಾಠಶಾಲೆ”ಯನು ಸಾ್ಥಪಿಸಿದರು. ಬಳಿಕ ಅದನು ಕನಾಟಕದ ವೆಂಕಟಾಪುರಕೆ ಸ್ಥಳಾಂತರಿಸಲಾಯಿತು. ಈ ಪಾಠಶಾಲೆಯಲಿ್ಲ ವಿದಾ್ಯ ಗಳಿಗೆ ಸಂಸ್ಕೃತ ಸಾಹಿತ್ಯ, ಕಾವ್ಯ, ವಾ್ಯಕರಣ, ವೇದ ಹಾಗೂ ದೆ್ವೖತಸಿದಾ್ಧಂತ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಿಷಯಗಳನು ಬೋಧಿಸಲಾಗುತಿ್ತದು್ದ, ವಿದಾ್ಯ ಗಳ ಸಂಪೂಣ ವೆಚ್ಚವನು ಮಠವೇ ಭರಿಸುತಿ್ತತು್ತ.
ನಂತರ 1992 ರಲಿ್ಲ ಮಠದ 23ನೇ ಯತಿವಯರಾದ ಶ್ರೀಮದ್ ವಿದಾ್ಯಧಿರಾಜತೀಥ ಶಿ್ರೕಪಾದಂಗಳವರು ಪಾಠಶಾಲೆಯನು ಪತಗಾಳಿಗೆ ಸ್ಥಳಾಂತರಿಸಿ “ಜೀವೋತ್ತಮ ವೈದಿಕ ಸಂಸ್ಕೃತ ಪಾಠಶಾಲೆ” ಎಂದು ನಾಮಕರಣ ಮಾಡಿದರು. ಈ ಸಂಸೆ್ಥಯ ಮೂಲಕ ಐನೂರಕೂ ಅಧಿಕ ವಿದಾ್ಯ ಗಳು ಶಿಕ್ಷಣ ಪಡೆದು ಸಮಾಜದಲಿ್ಲ ಗೌರವಯುತ ಜೀವನವನು ನಡೆಸಿದಾ್ದರೆ. ಆದರೆ ಆಧುನಿಕ ಶಿಕ್ಷಣದ ಪ್ರಭಾವದಿಂದ ವಿದಾ್ಯ ಗಳ ಸಂಖೆ್ಯ ಕ್ರಮೇಣ ಕಡಿಮೆಯಾಗುತಾ್ತ ಬಂದ ಪರಿಣಾಮ, 2016ರ ವೇಳೆಗೆ ಪ್ರವೇಶ ಪ್ರ ್ರಯೆ ಸಂಪೂಣ ಸ್ಥಗಿತಗೊಂಡಿತು್ತ.
ಇತಿ್ತೕಚಿನ ದಿನಗಳಲಿ್ಲ ವೇದಾಧ್ಯಯನದ ಬಗೆ ಸಮಾಜದಲಿ್ಲ ಪುನಃ ಆಸ ್ತ ಮೂಡುತಿ್ತರುವ ಹಿನೆಲೆಯಲಿ್ಲ, ಮಠದ ೨೪ನೇ ಯತಿವಯರಾದ ಪರಮಪೂಜ್ಯ ಶ್ರೀಮದ್ ವಿದಾ್ಯಧೀಶತೀಥ ಶ್ರೀಪಾದ ವಡೆಯರ್ ಸಾ್ವಮೀಜಿಯವರು “ಜೀವೋತ್ತಮ ವಿದಾ್ಯಪೀಠಂ” ಎಂಬ ಹೆಸರಿನಲಿ್ಲ ಈ ವಿದಾ್ಯಸಂಸೆ್ಥಯನು ಪುನಶೆ್ಚೕತನಗೊಳಿಸುವ ಮೂಲಕ ನವಚೈತನ್ಯ ತುಂಬಿದಾ್ದರೆ. ಈ ಸಂದಭದಲಿ್ಲ ಶಿ್ರೕಪಾದರು ವಿದಾ್ಯ ಗಳು ಹಾಗೂ ಭಕಾ್ತದಿಗಳನು ಉದೆ್ದೕಶಿಸಿ ಅನುಗ್ರಹ ಆಶೀವಚನ ನೀಡಿದರು. “ಈ ವಿದಾ್ಯಪೀಠವು ಹಿಂದೂ ಸನಾತನ ಧಮದ ಸಂರಕ್ಷಣೆಯ ದೃಷಿಯಿಂದ ಶಿ್ರೕಮಧ್ವ ಸಿದಾ್ಧಂತವನು ಅನುಸರಿಸುವ ವೇದಾಧ್ಯಯನದ ಕೇಂದ್ರಬಿಂದುವಾಗಿದೆ.
ಐದು ವಷಗಳ ಪಠ್ಯಕ್ರಮದಲಿ್ಲ ಸಂಸ್ಕೃತ, ವೇದ, ಕಮಾಂಗ ಹಾಗೂ ಜೊ್ಯೕತಿಷ್ಯ ವಿಷಯಗಳಿಗೆ ಪಾ್ರಧಾನ್ಯ ನೀಡಲಾಗುವುದು. ಹತು್ತ ವಷಗಳ ಪಠ್ಯಕ್ರಮದಲಿ್ಲ ಸಂಸ್ಕೃತ, ವೇದ, ಕಮಾಂಗ, ಜೊ್ಯೕತಿಷ್ಯ, ನಾ್ಯಯ, ವಾ್ಯಕರಣ ಹಾಗೂ ವೇದಾಂತ ವಿಷಯಗಳ ಸಮಗ್ರ ಅಧ್ಯಯನಕೆ ಅವಕಾಶ ಕಲಿಸಲಾಗುವುದು” ಎಂದು ತಿಳಿಸಿದರು. ವಿದಾ್ಯಪೀಠದ ಸಂಸ್ಕೃತ ವಿಭಾಗಕೆ ಶಿ್ರೕ ಗಣೇಶ್ ಭಟ್ ಗೋಕರ್ಣ ಹಾಗೂ ಶಿ್ರೕ ರಘುವೋತ್ತಮ ಆಚಾರ್ಯ ಬೆಂಗಳೂರು ಅವರನು, ವೇದ ವಿಭಾಗಕೆ ಶಿ್ರೕ ಅಥವ ಭಾಂಡೆಕರ್ ಅವರನು ಹಾಗೂ ಮುಖೊ್ಯೕಪಾಧಾ್ಯಯರಾಗಿ ಜೊ್ಯೕತಿಷ್ಯ ಮತು್ತ ಕಮಾಂಗ ವಿಭಾಗಕ್ಕೆ ಹೊನಾವರದ ಇಡಗುಂಜಿಯ ಶಿ್ರೕ ಲಕ್ಷೀಕಾಂತ ಭಟ್ ಅವರನು ನಿಯೋಜಿಸಲಾಗಿದೆ.
ಈ ಪಾಠಶಾಲೆಯ ಮೂಲಕ ವಿದ್ವತ್ ಹಾಗೂ ವಿದಾ್ವನ್ ಶಿಕ್ಷಣವನು ಪಡೆದು ಶಿ್ರೕಮಧ್ವ ಸಿದಾ್ಧಂತದ ಪ್ರಚಾರ ಹಾಗೂ ಸಾರಸ್ವತ ಸಮಾಜದ ಸೇವೆಯಲಿ್ಲ ತೊಡಗುವ ಉತ್ತಮ ಪಂಡಿತರನು ರೂಪಿಸುವ ಗುರಿಯನು ಹೊಂದಲಾಗಿದೆ. ಇದು ಕೇವಲ ಒಂದು ಶಿಕ್ಷಣ ಸಂಸೆ್ಥಯ ಆರಂಭವಲ್ಲ; ಸನಾತನ ವೈದಿಕ ಪರಂಪರೆ, ಶಿ್ರೕಮಧ್ವ ಸಿದಾ್ಧಂತ ಹಾಗೂ ಗುರುಪರಂಪರೆಯ ಾನಸಂಪತ್ತನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಪಸರಿಸುವ ಮಹತ್ವದ ಹೆಜೆಯಾಗಿದೆ. ಗುರುಪರಂಪರೆಯಿಂದ ಪಾವನಗೊಂಡ ಪರ್ತಗಾಳಿ ಕ್ಷೇತ್ರದಲಿ್ಲ ಆರಂಭಗೊಂಡಿರುವ ಈ ವಿದಾ್ಯಪೀಠವು ಭವಿಷ್ಯದಲಿ್ಲ ಅನೇಕ ವೇದಪಂಡಿತರು, ಶಾಸ್ತ್ರಪಾರಂಗತರು ಹಾಗೂ ಸಮಾಜಮುಖಿ ವ್ಯ ್ತ ತ್ವಗಳನು ರೂಪಿಸುವ ಕೇಂದ್ರವಾಗಿ ಬೆಳೆಯಲಿ ಎಂದು ಶಿ್ರೕಪಾದರು ಆಶೀವದಿಸಿದರು.
ಶ್ರೀ ಹರಿ ಗುರು ಮತು್ತ ಸರಸ್ವತಿ ಪೂಜೆಯ ಬಳಿಕ ವಿದಾ್ಯ ಗಳಿಗೆ ಪಠ್ಯಪುಸ್ತಕಗಳು ಹಾಗೂ ಅಗತ್ಯ ಶಿಕ್ಷಣೋಪಕರಣಗಳನು ವ ಿತರಿಸುವ ಮೂಲಕ ವಿದಾ್ಯಪೀಠದ ಶುಭಾರಂಭಕೆ ಅನುಗ್ರಹ ನೀಡಲಾಯಿತು. ಈ ಸಂದಭದಲಿ್ಲ ಪದ್ಮಶಿ್ರೕ ಪುರಸ್ಕೃತ ಶ್ರೀ ಮೋಹನ ದಾಸ್ ಪೈ, ಶ್ರೀ ಆರ್. ಎಸ್. ಶಾನುಭಾಗ್ (ಬೆಂಗಳೂರು), ಶ್ರೀ ಮಠದ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ್ ವಿ. ದೆಂಪೋ, ಉಪಾಧ್ಯಕ್ಷ ಶ್ರೀ ರಾಮಚಂದ್ರ ಆರ್. ಕಾಮತ್, ಪತಗಾಳಿ ಚಾತುಮಾಸ್ಯ ಸಮಿತಿಯ ಅಧ್ಯಕ್ಷ ಶ್ರೀ ಅನಿಲ್ ಪೈ, ಸಮಿತಿ ಸದಸ್ಯರಾದ ಶ್ರೀ ದಿನೇಶ್ ಪೈ ಹಾಗೂ ಶ್ರೀ ಯೋಗೀಶ್ ಕಾಮತ್, ವಿದ್ವಾನ್ ಶಿ್ರೕ ರಾಮಕೃಷ್ಣ ಭಟ್, ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳು, ಶ್ರೀ ಜೀವೋತ್ತಮ ವೈದಿಕ ಸಂಘದ ಸದಸ್ಯರು, ವೈದಿಕ ವೃಂದ ಹಾಗೂ ಸಮಾಜಬಾಂಧವರು ಉಪಸಿ್ಥತರಿದ್ದರು. ಈ ಪ್ರಕಟಣೆಯನು ಶಿ್ರೕ ಮಠದ ಸಾಮಾಜಿಕ ಮಾಧ್ಯಮ ತಂಡವು ನೀಡಿದೆ.