LATEST NEWS
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ 60 ಆನೆಗಳ ಹಿಂಡಿಗೆ ರೈಲು ಡಿಕ್ಕಿಯಾಗುವುದನ್ನು ತಪ್ಪಿಸಿದ ಲೋಕೋಪೈಲೆಟ್
ಮಾಲಿಗಾಂವ್, ಅಕ್ಟೋಬರ್ 17 :ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಅಲರ್ಟ್ ಆದ ರೈಲಿನ ಲೋಕೋ ಪೈಲೆಟ್ ರೈಲಿಗೆ ಎಮೆರ್ಜೆನ್ಸಿ ಬ್ರೇಕ್ ಹಾಕುವ ಮೂಲಕ 60ಕ್ಕೂ ಅಧಿಕ ಆನೆಗಳನ್ನು ಕಾಪಾಡಿದ ಘಟನೆ ಹಬೈಪುರ್ ಮತ್ತು ಲಮ್ಸಾಖಾಂಗ್ ನಿಲ್ದಾಣದ ನಡುವಿನ ರೈಲ್ವೆ ಬಳಿ ಬಳಿ ನಡೆದಿದೆ.
ಲೋಕೋ ಪೈಲಟ್ ಜೆಡಿ ದಾಸ್ ಮತ್ತು ಸಹಾಯಕ ಲೋಕೋ ಪೈಲಟ್ ಉಮೇಶ್ ಕುಮಾರ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಅಕ್ಟೋಬರ್ 16 ರಂದು ಅಸ್ಸಾಂನಲ್ಲಿ ಈ ಘಟನೆ ನಡೆದಿದೆ, 15959 ಕಾಮ್ರೂಪ್ ಎಕ್ಸ್‌ಪ್ರೆಸ್ ರೈಲು ಹಬೈಪುರ್ ಮತ್ತು ಲಮ್ಸಾಖಾಂಗ್ ನಿಲ್ದಾಣದ ನಡುವಿನ ರೈಲ್ವೆ ಹಳಿಯಲ್ಲಿ ಸಂಚರಿಸುತ್ತಿರು ವೇಳೆ ಸುಮಾರು 60ಕ್ಕೂ ಅಧಿಕ ಆನೆಗಳ ಹಿಂಡೊಂದು ರೈಲ್ವೆ ಹಳಿಯನ್ನು ದಾಟುತ್ತಿತ್ತು, ಈ ವೇಳೆ ಆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್) ಮೂಲಕ ಲೋಕೋ ಪೈಲೆಟ್ ಗಳನ್ನು ಎಚ್ಚರಿಸಲಾಗಿತ್ತು. ಕೂಡಲೇ ಲೋಕೋಪೈಲೆಟ್ ಟ್ರೈನ್ ಗೆ ತುರ್ತು ಬ್ರೇಕ್ ಹಾಕಿದ ಕಾರಣ ಆನೆಗಳ ಹಿಂಡಿಗೆ ರೈಲು ಡಿಕ್ಕಿಯಾಗುವುದು ತಪ್ಪಿದೆ.