LATEST NEWS
ರೈಲಿಗೆ ಸಿಲುಕಿ ಎರಡು ಮರಿ ಆನೆಗಳ ಸಾವು

ರೈಲಿಗೆ ಸಿಲುಕಿ ಎರಡು ಮರಿ ಆನೆಗಳ ಸಾವು
ಪುತ್ತೂರು ಜೂನ್ 4:ರೈಲಿಗೆ ಸಿಲುಕಿ ಎರಡು ಆನೆ ಮರಿಗಳು ಸಾವನಪ್ಪಿದ ಘಟನೆ ಎಡಕುಮೇರಿ ಬಳಿ ನಡೆದಿದೆ. ಆನೆಗಳು ರೈಲ್ವೆ ಹಳಿ ದಾಟುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ಈ ಘಟನೆ ನಡೆದಿದ್ದು, ರೈಲ್ವೆ ಹಳಿ ದಾಟುವಾಗ ಬೆಂಗಳೂರು- ಮಂಗಳೂರು ರೈಲಿಗೆ ಸಿಲುಕಿ ಮರಿಯಾನೆಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.

ರೈಲ್ವೇ ಹಳಿಯ ಮೇಲೆ ಆನೆಗಳ ಕಳೆಬರಹಗಳು ಪತ್ತೆಯಾಗಿದ್ದು,ಈ ಘಟನೆಯಿಂದ ಬೆಂಗಳೂರು ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಮತ್ತು ಹಾಸನ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಗಾಯಗೊಂಡಿರುವ ಆನೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ.