Connect with us

LATEST NEWS

ಬಿಸಿಲೆ ಘಾಟ್ ಬಳಿ ಗೂಡ್ಸ್ ಟೆಂಪೋ ಮೇಲೆ ಆನೆ ದಾಳಿ- ಸವಾರರು ಪ್ರಾಣಾಪಾಯದಿಂದ ಪಾರು

ಬಿಸಿಲೆ ಘಾಟ್ ಬಳಿ ಗೂಡ್ಸ್ ಟೆಂಪೋ ಮೇಲೆ ಆನೆ ದಾಳಿ- ಸವಾರರು ಪ್ರಾಣಾಪಾಯದಿಂದ ಪಾರು

ಪುತ್ತೂರು ಅಕ್ಟೋಬರ್ 30: ಬಿಸಿಲೆ ಘಾಟ್ ರಸ್ತೆಯಲ್ಲಿ ವಾಹನದಲ್ಲಿ‌ ತೆರಳುತ್ತಿದ್ದವರ ಮೇಲೆ ಕಾಡಾನೆ‌ ದಾಳಿ ನಡೆಸಿದ ಘಟನೆ ನಡೆದಿದೆ.
ಇಂದು ರಾತ್ರಿ ಒಂದು ಕುಲ್ಕುಂದ ಗೇಟಿನ ಮುಂದಿನ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.

ಸೋಮವಾರ ಪೇಟೆ ಮೂಲದ ಮೀನು ವ್ಯಾಪಾರಿಗಳು ಮಹಿಂದ್ರಾ ಗೂಡ್ಸ್ ಟೆಂಪೋದಲ್ಲಿ ಬಿಸಿಲೆ ಘಾಟ್ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಹಾಗೂ ಅದರ ಮರಿಯೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮಹಿಂದ್ರಾ ಗೂಡ್ಸ್ ಮೇಲೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹೀಂದ್ರಾ ಗೂಡ್ಸ್ ನ ಮುಂಭಾಗ ಸಂಪೂರ್ಣ ಪುಡಿಗೈದಿದೆ.

ಆನೆ ದಾಳಿಯಿಂದ ಗಾಡಿಯಲ್ಲಿದ್ದ ಇಬ್ಬರು ಪಾರಾಗಿದ್ದಾರೆ. ವಾಹನದಲ್ಲಿದ್ದವರು ಸೋಮವಾರಪೇಟೆ ಮೂಲದ ಹಮೀದ್ ಮತ್ತು ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *