LATEST NEWS
ಮಂಗಳೂರು – ಏಕಾಏಕಿ ರಿವರ್ಸ್ ಚಲಿಸಿದ ಇಲೆಕ್ಟ್ರಿಕ್ ಕಾರು – ಸರಣಿ ಅಪಘಾತ

ಮಂಗಳೂರು ಮಾರ್ಚ್ 21: ಇಲೆಕ್ಟ್ರಿಕ್ ಕಾರೊಂದು ಏಕಾಏಕಿ ರಿವರ್ಸ್ ಚಲಿಸಿದ ಕಾರಣ ಸರಣಿ ಅಪಘಾತ ಸಂಭವಿಸಿದ ಘಟನೆ ಮಂಗಳೂರಿನ ರಾಷ್ಟಕವಿ ಗೋವಿಂದ ಪೈ ವೃತ್ತದ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಎರಡು ಅಟೋ ಮೂರು ಕಾರುಗಳು ಜಖಂಗೊಂಡಿದೆ. ಇಲೆಕ್ಟ್ರಿಕ್ ಕಾರಿನ ಮಾಲೀಕ ರಿವರ್ಸ್ ಮೋಡ್ ನಲ್ಲಿ ಕಾರು ಇರುವುದನ್ನು ನೋಡದೇ ಕಾರು ಚಲಾಯಿಸಿದ ಕಾರಣ ಕಾರು ವೇಗವಾಗಿ ಕಾರು ರಿವರ್ಸ್ ಚಲಿಸಿದ್ದು ಹಿಂಬದಿಯಿಂದ ಬರುತ್ತಿದ್ದ ಇವಿ ಅಟೋಗೆ ಡಿಕ್ಕಿ ಹೊಡೆದ ಬಳಿಕ ಸರಣಿಯಾಗಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತವಾದ ತಕ್ಷಣವೇ ಕಾರು ಚಾಲಕ ಕಾರಿನಿಂದ ಇಳಿದು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಯಲ್ಲಿದ್ದ ಅಪಘಾತಕ್ಕೆ ಒಳಗಾದ ಕಾರುಗಳನ್ನು ತೆರವು ಮಾಡಿ ಸಂಚಾರ ಸುಗಮಗೊಳಿಸಿದ್ದಾರೆ. ಅಪಘಾತದಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
