Connect with us

FILM

ಸುದೀಪ್ ಅಭಿನಯದ ‘ಈಗ’ ಚಿತ್ರದ ನಟಿ ಹಂಸ ಅವರಿಗೆ ಸ್ತನ ಕ್ಯಾನ್ಸರ್

ಮುಂಬೈ ಡಿಸೆಂಬರ್ 20:ಕಿಚ್ಚ ಸುದೀಪ್ ಅಭಿನಯದ ತೆಲುಗಿನ ಸೂಪರ್ ಹಿಟ್ ಚಿತ್ರ ಈಗ ದಲ್ಲಿ ನಟಿಸಿದ್ದ ನಟಿ ಹಂಸ ಅವರಿಗೆ ಸ್ತನದ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಿನಿಮಾಗಳಿಂದ ದೂರ ಉಳಿದಿದ್ದ ಇವರು ಇಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ತಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶೀಘ್ರದಲ್ಲೇ ಪೂರ್ಣ ಗುಣಮುಖರಾಗುವುದಾಗಿ ಹೇಳಿಕೊಂಡಿದ್ದಾರೆ.ನನ್ನ ಜೀವನದ ಮೇಲೆ ಎಷ್ಟೇ ಪ್ರಭಾವ ಬೀರಿದರೂ.. ನಾನು ಬಲಿಪಶುವಾಗಲು ಬಯಸುವುದಿಲ್ಲ. ಭಯ ಮತ್ತು ನಕಾರಾತ್ಮಕ ಭಾವನೆಗಳೊಂದಿಗೆ ಬದುಕಬೇಡಿ. ಪ್ರತಿ ಕಷ್ಟವನ್ನೂ ಧೈರ್ಯದಿಂದ ಎದುರಿಸಿ ಮುನ್ನಡೆಯಬೇಕು ಎಂದಿದ್ದಾರೆ.


ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಮೂರನೇ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 9 ಹಂತಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅವರು ಪ್ರಕಟಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯಿಂದಾಗಿ ಕೂದಲು ಇಲ್ಲದ ತಲೆಯ ಫೋಟೋವನ್ನು ಶೇರ್‌ ಮಾಡಿರುವ ಅವರು ಚಿಕಿತ್ಸೆ ಪಡೆಯುತ್ತಿರುವುದ್ದಾಗಿ ಬರೆದುಕೊಂಡಿದ್ದಾರೆ. ಅವರ ಪಾಸಿಟಿವಿಟಿ ನಡೆಯು ಅಭಿಮಾನಿಗಳಿಗೆ ಇಷ್ಟವಾಗಿದೆ. ಮತ್ತೊಂದು ಸ್ತನಕ್ಕೂ ಕ್ಯಾನ್ಸರ್​ ಹಬ್ಬುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಬರೆದಿದ್ದಾರೆ. ಈ ಕ್ಯಾನ್ಸರ್‌ನಿಂದ ನಾನು ಭಯಗೊಂಡಿಲ್ಲ, ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದಿದ್ದಾರೆ.


ನಂದಿನಿ ಅವರು ಸಿನಿಮಾರಂಗಕ್ಕೆ 2004ರಲ್ಲಿ ಪಾದಾರ್ಪಣೆ ಮಾಡಿದ್ದರು. ಅವರು ಕನ್ನಡದಲ್ಲಿ ‘ಮೋಹಿನಿ 9886788888’ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ಮೋಹಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೆಚ್ಚು ತೆಲುಗು ಸಿನಿಮಾಗಳಲ್ಲಿ ಹಂಸ ನಟಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *