BANTWAL
ಗುಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಪೋಲೀಸ್ ಫೈಯರಿಂಗ್…!?
ಬಂಟ್ವಾಳ, ಅಕ್ಟೋಬರ್ 24: ಗುಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಪೋಲೀಸ್ ಫೈಯರಿಂಗ್ ನಲ್ಲಿ ಇಬ್ಬರು ಕೊಲೆ ಆರೋಪಿಗಳ ಬಂಧನ, ಇನ್ನಿಬ್ಬರು ಆರೋಪಿಗಳು ಪರಾರಿಯಾದ ಘಟನೆ ನಡೆದಿದೆ..
ಗುಂಡಿನ ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಹಾಗೂ ಕೊಲೆ ಆರೋಪಿ ಖಲೀಲ್ ಗೆ ಗಾಯವಾಗಿದ್ದು ಇಬ್ಬರನ್ನೂ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಮೆಲ್ಕಾರ್ ನಲ್ಲಿ ನಿನ್ನೆ ಸಂಜೆ ನಡೆದ ಕೊಲೆ ರೌಡಿಶೀಟರ್ ಚೆನ್ನೆ ಫಾರೂಕ್ ಕೊಲೆ ಆರೋಪಿ ಖಲೀಲ್ ಮತ್ತು ಆತನ ಜೊತೆ ಇಬ್ಬರು ಸಹಚರರು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧಾರಿಸಿ ಅವರನ್ನು ಬಂಟ್ವಾಳದಿಂದ ಬೆನ್ನಟ್ಟಿ ಬಂಧಿಸಲು ಮುಂದಾದ ಸಂದರ್ಭದಲ್ಲಿ ಗುಂಡ್ಯಾ ಸಮೀಪದ ಅಡ್ಡಹೊಳೆಯಲ್ಲಿ ಆರೋಪಿ ಖಲೀಲ್ ಪೋಲೀಸರ ಮೇಲೆಯೇ ತಲವಾರು ಝಳಪಿಸಿದ್ದಾನೆ.
ಈ ಸಂದರ್ಭದಲ್ಲಿ ಆರೋಪಿಯಿಂದ ತಪ್ಪಿಸಿಕೊಳ್ಳಲು ಪೋಲೀಸರು ಆತನ ಮೇಲೆ ಫೈರಿಂಗ್ ಮಾಡಿದ್ದಾರೆ.
ಬಂಟ್ವಾಳ ಎಸ್.ಐ ಅವಿನಾಶ್ ಕೊಲೆ ಆರೋಪಿ ಖಲೀಲ್ ನ ಕಾಲಿಗೆ ಗುಂಡು ಹಾರಿಸಿದ್ದು, ಈ ಸಂದರ್ಭದಲ್ಲಿ ಆರೋಪಿ ಇನ್ನೋರ್ವ ಪೋಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಪ್ರಸನ್ನ ಅವರ ಮೇಲೆ ತಲವಾರು ಬೀಸಿದ್ದಾನೆ.
ಚೆನ್ನೆ ಫಾರೂಕ್ ಕೊಲೆ ಆರೋಪಿಗಳ ಬಂಧಿನಕ್ಕಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀ ಪ್ರಸಾದ್ ಎರಡು ತಂಡ ರಚಿಸಿದ್ದರು.
ಈ ಹಿನ್ನಲೆಯಲ್ಲಿ ನಟೋರಿಯಸ್ ಆರೋಪಿಗಳ ಬಂಧನಕ್ಕೆ ಎಸ್.ಐ.ಅವಿನಾಶ್ ಹಾಗೂ ಪ್ರಸನ್ನ ಪತ್ತೆ ಕಾರ್ಯ ಆರಂಭಿಸಿದ್ದರು.
ಈ ನಡುವೆ ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿರುವ ಖಚಿತ ಮಾಹಿತಿ ಪೋಲೀಸ್ ತಂಡಕ್ಕೆ ಲಭ್ಯವಾದ ಹಿನ್ನಲೆಯಲ್ಲಿ ಆರೋಪಿಗಳನ್ನು ಅಡ್ಡಹೊಳೆವರೆಗೆ ಅಟ್ಟಾಡಿಸಿ ಹೋಗಿದ್ದರು.
ಪೋಲೀಸ್ ಜೀಪನ್ನು ಆರೋಪಿಗಳ ಕಾರಿಗೆ ಅಡ್ಡಗಟ್ಟಿದ ಸಂದರ್ಭದಲ್ಲಿ ನಟೋರಿಯಸ್ ಆರೋಪಿ ಖಲೀಲ್ ಪೋಲೀಸರ ಮೇಲೆಯೇ ತಲವಾರು ದಾಳಿಗೆ ಮುಂದಾಗಿದ್ದಾನೆ.
ಈ ವೇಳೆ ಖಲೀಲ್ ನ ಇನ್ನೋರ್ವ ಸಹಚರ ಹಫೀಝ್ ಹಾಗೂ ಇನ್ನೊಬ್ಬ ಆರೋಪಿ ಪಕ್ಕದಲ್ಲೇ ಇದ್ದ ಕಾಡಿಗೆ ಓಡಿ ಹೋಗಿ ತಪ್ಪಿಸಿ ಕೊಂಡಿದ್ದಾರೆ.