LATEST NEWS
ಮಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಮಳೆ ಅಬ್ಬರ – ಅಟೋ ರಿಕ್ಷಾ ಮೇಲೆ ಬಿದ್ದ ಮರ

ಮಂಗಳೂರು ಎಪ್ರಿಲ್ 11: ಮಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಭಾರಿ ಗಾಳಿ ಮಳೆ ಸುರಿದಿದೆ. ಗುಡುಗು ಸಿಡಿಲು ಸಹಿತ ಮಳೆ ಸುರಿದಿದ್ದು, ಮಳೆ ಅಬ್ಬರಕ್ಕೆ ಲೆಡಿಹಿಲ್ ಬಳಿ ಅಟೋರಿಕ್ಷಾ ಒಂದರ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ.
ಮಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿದೆ.ನಗರದ ವಿವಿಧೆಡೆ ಶುಕ್ರವಾರ ಬೆಳಗ್ಗೆಯೇ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ ಎಡೆಬಿಡದೆ ವರ್ಷಧಾರೆ ಸುರಿದಿದೆ. ದಿಢೀರ್ ಮಳೆಯಿಂದಾಗಿ ಸಾರ್ವಜನಿಕರು ಹೈರಾಣಾದರು. ದಿನನಿತ್ಯದ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಪರದಾಡುವಂತಾಯಿತು.

ಇನ್ನು ಬೆಳಿಗ್ಗೆ ಸುರಿದ ಮಳೆಗೆ ಲೆಡಿಹಿಲ್ ಬಳಿ ಮರವೊಂದು ರಿಕ್ಷಾ ಮೇಲೆ ಬಿದ್ದ ಪರಿಣಾಮ ಆಟೋ ರಿಕ್ಷಾಕ್ಕೆ ಹಾನಿಯಾಗಿದೆ. ಈ ಘಟನೆಯಲ್ಲಿ ಪ್ರಯಾಣಿಕ ಹಾಗೂ ಡ್ರೈವರ್ ಗೆ ಯಾವುದೇ ಹಾನಿ ಯಾಗಿಲ್ಲ. ಪಾಂಡೇಶ್ವರ ಅಗ್ನಿಶಾಮಕ ದಳ ಹಾಗೂ ಸ್ಥಳಿಯ ಪೋಲಿಸರು ಮರ ತೆರವು ಕಾರ್ಯಾಚರಣೆ ನಡೆಸಿದರು.
ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಎ.11 ಮತ್ತು 12 ರಂದು ಭಾರತೀಯ ಹವಾಮಾನ ಇಲಾಖೆಯು “ಎಲ್ಲೋ ಅಲರ್ಟ್’ ಘೋಷಿಸಿದೆ. ಈ ವೇಳೆ ಗುಡುಗು ಸಹಿತ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ.
1 Comment