Connect with us

LATEST NEWS

ಮರಳು ಮಾಫಿಯಾಗಳ ನಿಯಂತ್ರಿಸಿ ಕುದ್ರು ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿವೈಎಫ್ಐ ಆಗ್ರಹ

ಮರಳು ಮಾಫಿಯಾಗಳ ನಿಯಂತ್ರಿಸಿ ಕುದ್ರು ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿವೈಎಫ್ಐ ಆಗ್ರಹ

ಮಂಗಳೂರು, ಫೆಬ್ರವರಿ 02 : ಮಂಗಳೂರಿನ ಕೊಣಾಜೆ ವ್ಯಾಪ್ತಿಯ ಉಳಿಯ ಕುದ್ರು ಎಂಬಲ್ಲಿ ಕಾಲು ಸೇತುವೆ ಧ್ವಂಸಗೊಳಿಸಿ ಕುದ್ರು ನಿವಾಸಿಗಳ ವಾಹನಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು ಮತ್ತು ಇಲ್ಲಿನ ಮರಳು ಮಾಫಿಯಾಗಳ ನಿಯಂತ್ರಿಸಿ ಕುದ್ರು ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿವೈಎಫ್ಐ ಆಗ್ರಹಿಸಿದೆ.
ಉಳಿಯ ಕುದ್ರು ಸುತ್ತ-ಮುತ್ತ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ದೋಣಿಗಳ ವಶಪಡಿಸಲು ಬಂದಿದ್ದ ಅಧಿಕಾರಿಗಳಿಗೆ ದೋಣಿ ಒದಗಿಸಿದ್ದ ಕಾರಣಕ್ಕಾಗಿ ಸ್ಥಳೀಯವಾಗಿ ಮರಳುಗಾರಿಕೆ ನಡೆಸುವ ಮಾಫಿಯಾಗಳು ಕಳೆದ ರಾತ್ರಿ 1:30ರ ಸುಮಾರಿಗೆ 2 ಕಾರುಗಳಲ್ಲಿ ಬಂದು ಕಾಲು ಸೇತುವೆ ಯನ್ನು ಧ್ವಂಸಗೊಳಿಸಿ ಕಡವಿನ ಬಳಿ ನಿಲ್ಲಿಸಿದ್ದ ಕುದ್ರು ನಿವಾಸಿಗಳ ವಾಹನಗಳನ್ನು ಜಖಂಗೊಳಿಸಿ ಹಾನಿಗೊಳಿಸಿರುವ ಕಿಡಿಗೇಡಿಗಳ ಕೃತ್ಯವನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸಿದೆ.ಮರಳು ಮಾಫಿಯಾದ ವಿರುದ್ದ ಹೋರಾಟದಲ್ಲಿ ಕುದ್ರು ನಿವಾಸಿಗಳ ಜೊತೆ ಡಿವೈಎಫ್ಐ ಸಂಘಟನೆ ಧೃಡವಾಗಿ ನಿಲ್ಲಲಿದೆ ಎಂದು ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ.ಕಳೆದ 8 ವರ್ಷಗಳಿಂದ ಅಕ್ರಮ ಮರಳುಗಾರಿಕೆಯ ವಿರುದ್ದ ಧ್ವನಿ ಎತ್ತುತ್ತಾ ಬಂದಿದ್ದಾರೆ . ಅಲ್ಲದೆ ಕುದ್ರು ಉಳಿಸಲಿಕ್ಕಾಗಿ ಅನೇಕ ರೀತಿಯ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದರೂ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನ ಸಿಕ್ಕಿರುವುದಿಲ್ಲ.ಎಂದು ಹೇಳಿದ ಅವರು ಕುದ್ರು ಉಳಿಸಲಿಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕುದ್ರು ನಾಗರಿಕರಿಗೆ ಧೈರ್ಯ ನೀಡಿ ಅವರ ಜೊತೆ ಕೈ ಜೋಡಿಸಬೇಕಾಗಿದೆ. ಕಡವಿನ ಬಳಿ ನಿಲ್ಲಿಸಿ ಬರುವ ಕುದ್ರು ನಿವಾಸಿಗಳ ವಾಹನಗಳಿಗೆ ರಕ್ಷಣೆ ನೀಡಬೇಕು ಮತ್ತು ಕುದ್ರುವಿನ ಕಾಲು ಸೇತುವೆ ಧ್ವಂಸ ಮಾಡಿರುವ ಮರಳು ಮಾಫಿಯಾದವರ ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಾನೂನಿನಡಿಯಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಜೆಸಿಬಿ ಮೂಲಕ ಮರಳುಗಾರಿಕೆಯನ್ನು ಮಾಡುವವರ ವಿರುಧ್ದ ಕ್ರಮ ಜರಗಿಸಬೇಕು ಮತ್ತು ನಿಷಿದ್ದ ಪ್ರದೇಶಗಳಲ್ಲಿ,ಕುದ್ರವಿನ ಸುತ್ತಮುತ್ತ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು.ಮರಳುಗಾರಿಕೆಯಲ್ಲಿ ತೊಡಗುವ ಕಾರ್ಮಿಕರಿಗೆ ಪೋಲೀಸ್ ಪರಿಶೀಲನೆ ನಡೆಸಿ ಪೊಲೀಸ್ ಧೃಡೀಕರಣ ಕಡ್ಡಾಯಗೊಳಿಸಬೇಕು.
ಮರಳುಗಾರಿಕೆ ನಡೆಸುವವರು ರಾಜಕೀಯ ಪ್ರಭಾವಿಗಳಾಗಿದ್ದು ಗೂಂಡಾಗಿರಿಯ ಮೂಲಕ ಕುದ್ರು ನಿವಾಸಿಗಳನ್ನು ಬೆದರಿಸುತ್ತಿದ್ದು ಆದುದರಿಂದ ಕುದ್ರು ನಿವಾಸಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕಾಲು ಸೇತುವೆ ಧ್ವಂಸಗೊಳಿಸಿ ವಾಹನ ಜಖಂಗೊಳಿಸಿದ ಕಿಡಿಗೇಡಿಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಬಂಧಿಸಬೇಕು. ಬಂಧನ ಕಾರ್ಯ ವಿಳಂಬವಾದರೆ ಕುದ್ರು ನಿವಾಸಿಗಳನ್ನು ಸಂಘಟಿಸಿ ತೀವ್ರ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿ.ಕೆ ಇಮ್ತಿಯಾಝ್ ಎಚ್ಚರಿಸಿದ್ದಾರೆ.
ಉಳಿಯ ಕುದ್ರುವಿನ ಜನರು ಅಕ್ರಮ ಮರಳುಗಾರಿಕೆಯಿಂದಾಗಿ ನದಿಯು ಆಳವಾಗಿದ್ದು ಮಕ್ಕಳು ಮಹಿಳೆಯರು ವೃದ್ದರು ಜೀವಭಯದ ಆತಂಕದಲ್ಲಿ ನದಿ ದಾಟಿ ಜೀವನ ಸಾಗಿಸುವುದನ್ನು ಮನಗಂಡು ಸ್ಥಳೀಯ ಚರ್ಚಿನ ಧರ್ಮಗುರುಗಳು ಸಾರ್ವಜನಿಕರ ನೆರವು ಪಡೆದು ಕಾಲು ಸೇತುವೆಯನ್ನು ಕಳೆದ ವರ್ಷ ನಿರ್ಮಿಸಿಕೊಟ್ಟಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *