DAKSHINA KANNADA
ಪೆಟ್ರೋಲ್ ಬೆಲೆ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರದ ಕರ್ಮಕಾಂಡದಿಂದಾಗಿ ಏರಿಕೆಯಾಗಿದೆ- ಡಿವಿ ಸದಾನಂದ ಗೌಡ

ಪುತ್ತೂರು ಎಪ್ರಿಲ್ 02: ದೇಶದಲ್ಲಿ ಪೆಟ್ರೋಲ್ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರದ ಕರ್ಮಕಾಂಡದಿಂದಾಗಿ ಏರಿಕೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೆಟ್ರೋಲ್ ಬೆಲೆ ಏರಿಕೆಗೆ ಕೇಂದ್ರ ಸರಕಾರದ ಪಾತ್ರವಿಲ್ಲ ಎಂದ ಅವರು ಹಿಂದಿನ ಸರಕಾರದ ತಪ್ಪು ನೀತಿಯಿಂದಾಗಿ ಇಂದು ತೈಲ ಕಂಪನಿಗಳೇ ತನ್ನಷ್ಟಕ್ಕೆ ಬೆಲೆ ನಿಗದಿಪಡಿಸುವಂತಾಗಿದೆ. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುವ ಯುದ್ಧವೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ರಷ್ಯಾದಿಂದ ತೈಲ ಆಮದು ಮಾಡುವ ಕಂಪನಿಗಳಿಗೆ ಯುದ್ಧದಿಂದ ತೊಂದರೆಯಾಗಿದೆ. ಇದರಿಂದಾಗಿ ಬೆಲೆಯಲ್ಲಿ ಈ ರೀತಿಯ ಏರಿಳಿತಗಳು ಆಗುತ್ತಿದ್ದು, ಕೇಂದ್ರ ಸರಕಾರ ತೈಲ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ಕ್ರಮ ಕೈಗೊಳ್ಳುತ್ತಿದೆ ಎಂದರು.

ಸಹಕಾರಿ ಬ್ಯಾಂಕ್ ಗಳನ್ನು ವಿಲೀನ ಮಾಡಲಾಗುತ್ತದೆ ಎನ್ನೋದು ಸುಳ್ಳು ಸುದ್ಧಿ. ಇಂಥಹ ಯಾವುದೇ ವಿಚಾರ ಸರಕಾರದ ಮುಂದಿಲ್ಲ, ವಿಲೀನ ಮಾಡುವುದಿದ್ದಲ್ಲಿ ಸಹಕಾರಿ ವ್ಯವಸ್ಥೆಗಾಗಿ ಹೊಸ ಇಲಾಖೆ,ಮಂತ್ರಿಗಳನ್ನು ಮಾಡುತ್ತಿರಲಿಲ್ಲ. ರಾಜ್ಯದಲ್ಲಿ ಎಲ್ಲಾ ಸಹಕಾರಿ ಬ್ಯಾಂಕುಗಳು ಉತ್ತಮ ಕೆಲಸ ಮಾಡುತ್ತಿದೆ. ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ರಂಗದ ಕೊಡುಗೆ ಸಾಕಷ್ಟಿದೆ. ಆದರೆ ಸಹಕಾರಿ ರಂಗವನ್ನು ತಮ್ಮ ಸ್ವಂತಕ್ಕಾಗಿ ಬಳಸಿ,ರಂಗವನ್ನು ನುಂಗಿ ನೀರು ಕುಡಿದಿರುವುದೂ ಇದೆ. ಇಂಥಹ ಬ್ಯಾಂಕುಗಳನ್ನು ಖಂಡಿತವಾಗಿ ಮರ್ಜ್ ಮಾಡುವ ಕೆಲಸ ನಡೆಯಲಿದೆ ಎಂದರು. ಇಂದು ಸಹಕಾರಿ ಬ್ಯಾಂಕ್ ಗಳ ಮೂಲಕವೇ ಸರಕಾರ ಹಾಲಿನ ಪ್ರೋತ್ಸಾಹಧನ, ರೈತರಿಗೆ ಶೂನ್ಯ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಿದೆ.