LATEST NEWS
ತಡೆಗೊಡೆ ಕುಸಿದು ಮೃತಪಟ್ಟ ಹೆಬ್ಬಾರು ಬೈಲಿಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ

ತಡೆಗೊಡೆ ಕುಸಿದು ಮೃತಪಟ್ಟ ಹೆಬ್ಬಾರು ಬೈಲಿಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ
ಮಂಗಳೂರು ಜುಲೈ 8: ತಡೆಗೋಡೆ ಕುಸಿದು ಇಬ್ಬರು ಮೃತಪಟ್ಟ ಪುತ್ತೂರಿನ ಹೆಬ್ಬಾರುಬೈಲಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದರು.
ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ಸರಕಾರದ ವತಿಯಿಂದ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಎನ್.ಡಿ.ಆರ್.ಎಫ್ ಫಂಡ್ ಸೇರಿದಂತೆ ರಾಜ್ಯ ಸರಕಾರದಿಂದ ಬರುವ ಪರಿಹಾರಕ್ಕೂ ಪ್ರಯತ್ನಿಸುವುದಾಗಿ ಅವರು ಹೇಳಿದರು. ಘಟನೆಯಿಂದಾಗಿ ಮನೆ ಸಂಪೂರ್ಣ ನಾಶಗೊಂಡಿದ್ದ ಇಂದೇ ಮನೆ ಮಂದಿಗೆ ಪರ್ಯಾಯ ಮನೆಗೆ ವ್ಯವಸ್ಥೆ ಮಾಡಲು ಪುತ್ತೂರು ಸಹಾಯಕ ಆಯುಕ್ತರಿಗೆ ಸೂಚಿಸಿರುವುದಾಗಿ ತಿಳಿಸಿದರು.
