DAKSHINA KANNADA
ಡಸ್ಟರ್ ಕಾರಿಗೆ ಆಕಸ್ಮಿಕ ಬೆಂಕಿ ಸಂಪೂರ್ಣ ಸುಟ್ಟು ಭಸ್ಮ

ವಿಟ್ಲ: ಚಲಿಸುತ್ತಿದ್ದ ಡಸ್ಟರ್ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆ ಸುಟ್ಟು ಭಸ್ಮವಾದ ಘಟನೆ ವಿಟ್ಲಪಡ್ನೂರು ಗ್ರಾಮದ ಕೋಡಪದವು ಸರವು ಎಂಬಲ್ಲಿ ನಡೆದಿದೆ. ಕೆಲಿಂಜ ನಿವಾಸಿ ಸಿಟ್ರೀನ್ ಪಾಯಸ್ ಅವರಿಗೆ ಸೇರಿದ ವಾಹನ ಸಂಪೂರ್ಣವಾಗಿ ಸುಟ್ಟು ಕರಲಾಗಿದೆ.
ಇವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಕೇಳಿಸಿದ್ದು, ದಿಢೀರನೆ ಕಾರನ್ನು ಬದಿಗೆ ತಂದು ನಿಲ್ಲಿಸಿದ್ದಾರೆ. ಈ ಸಂದರ್ಭ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ತಕ್ಷಣವೇ ಅವರು ಕಾರಿನಿಂದ ಹೊರಗಡೆ ಬಂದು ಪಾರಾಗಿದ್ದಾರೆ.
