Connect with us

    LATEST NEWS

    ಬ್ರಹ್ಮಾವರ – ಕಿಂಡಿ ಅಣೆಕಟ್ಟಿನ ಮೇಲೆ ಶೇಖರಣೆಯಾದ ಭಾರೀ ತ್ಯಾಜ್ಯ

    ಉಡುಪಿ ಜುಲೈ 23: ಉಡುಪಿಯಲ್ಲಿ ಬಿದ್ದ ಭಾರಿ ಮಳೆ ನದಿ, ನದಿ ಪಾತ್ರಗಳಲ್ಲಿ ನೆರೆಸೃಷ್ಟಿಯಾಗಿತ್ತು. ನದಿ ಪಾತ್ರದ ಗದ್ದೆ ತೋಟಗಳು ಜಲಾವೃತವಾಗಿತ್ತು. ಮೈದುಂಬಿ ಹರಿದ ನದಿಗಳು ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿದೆ. ನೆರೆ ಇಳಿಯುತ್ತಿದ್ದಂತೆ ಆಗಿರುವ ಒಂದೊಂದೇ ಅವಾಂತರಗಳು ತೆರೆದುಕೊಳ್ಳುತ್ತಿದೆ.


    ಬ್ರಹ್ಮಾವರ ತಾಲೂಕಿನಲ್ಲಿ ಹರಿಯುವ ಸೀತಾ ನದಿ ನೀಲಾವರ ಗ್ರಾಮದ ಕಿಂಡಿ ಅಣೆಕಟ್ಟನ್ನು ಸಂಪೂರ್ಣ ಜಲಾವೃತ ಮಾಡಿತ್ತು. ನೆರೆ ನೀರು ಇಳಿಮುಖವಾಗುತ್ತಿದ್ದಂತೆ ಕಿಂಡಿ ಅಣೆಕಟ್ಟು ಮೇಲೆ ದೊಡ್ಡ ದೊಡ್ಡ ಮರದ ದಿಮ್ಮಿ, ಮರದ ರೆಂಬೆ ಕೊಂಬೆಗಳು ಕಸ ಪ್ಲಾಸ್ಟಿಕ್ ಇತ್ಯಾದಿಗಳು ಆವರಿಸಿಕೊಂಡು ಬಿಟ್ಟಿದೆ. ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ಅಣೆಕಟ್ಟು ಮೇಲೆ ಶೇಖರಣೆಯಾಗಿತ್ತು.

    ನೀಲಾವರ ಗ್ರಾಮ ಪಂಚಾಯತ್ ಕಿಂಡಿ ಅಣೆಕಟ್ಟನ್ನು ಸ್ವಚ್ಛ ಮಾಡುವ ಕೆಲಸ ಮಾಡಿಸುತ್ತಿದೆ. ಸಣ್ಣನೀರಾವರಿ ಇಲಾಖೆಯ ಅಣೆಕಟ್ಟಿನ ಮೇಲಿನ ತ್ಯಾಜ್ಯವನ್ನು ಸ್ವಚ್ಛ ಮಾಡುತ್ತಿದ್ದಂತೆ ನೀರು, ನೀಲಾವರದಿಂದ ಮಟಪಾಡಿ ಗ್ರಾಮದತ್ತ ಸರಾಗವಾಗಿ ಹರಿಯುತ್ತಿದೆ. ಇದು ಒಂದು ಕಡೆಯ ಸಮಸ್ಯೆ ಅಲ್ಲ, ಜಿಲ್ಲೆಯ ಹತ್ತಾರು ಕಡೆ ಪಂಚಾಯತ್ ಗಳು ಈ ಸಮಸ್ಯೆ ಯನ್ನು ಎದುರಿಸುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *