BELTHANGADI
ಭಾರಿ ಮಳೆಗೆ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಗುಡ್ಡ ಕುಸಿತ, ಮಂಗಳೂರು – ಚಿಕ್ಕಮಗಳೂರು ಸಂಪರ್ಕ ಕಡಿತದ ಭೀತಿ..!
ಬೆಳ್ತಂಗಡಿ : ಮಂಗಳೂರು – ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಭಾರಿ ಮಳೆಯ ಕಾರಣ ಭಾನುವಾರ ರಾತ್ರಿ ಗುಡ್ಡ ಕುಸಿದಿದ್ದು ಮಳೆ ಮುಂದುವೆದಿದ್ದಲ್ಲಿ ರಸ್ತೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿಯ ರಾಷ್ಟ್ರೀ ಯ ಹೆದ್ದಾರಿ ಅಲೇಖಾನ್ ನಲ್ಲಿ ಭಾನುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇನ್ನಷ್ಟು ಮಣ್ಣು ಕುಸಿಯುವ ಭೀತಿ ಎದುರಾಗಿದೆ. . ಕುಸಿತದ ರಭಸಕ್ಕೆ ಕಲ್ಲು ಹಾಗೂ ಮಣ್ಣು ರಸ್ತೆಯನ್ನು ಆವರಿಸಿತ್ತು. ಬಣಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತಾತ್ಕಲಿಕವಾಗಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರಸ್ತುತ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ ಎನ್ನಲಾಗಿದ್ದರೂ ಮಳೆ ಇನ್ನಷ್ಟು ಮುಂದುವರಿದರೆ ಹೆಚ್ಚಿನ ಕುಸಿತ ಉಂಟಾಗಿ ಸಂಪರ್ಕ ಕಡಿತ ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.