Connect with us

FILM

ಡ್ರಗ್ಸ್ ಸೇವನೆ ಆರೋಪದಲ್ಲಿ ತಮಿಳು ನಟ ಶ್ರೀಕಾಂತ ಅರೆಸ್ಟ್

ಚೆನ್ನೈ ಜೂನ್ 23: ತಮಿಳಿನ ಖ್ಯಾತ ನಟ ಶ್ರೀಕಾಂತ ಡ್ರಗ್ಸ್ ಪ್ರಕರಣದಲ್ಲಿ ಸೋಮವಾರ ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಡ್ರಗ್ಸ್ ಪ್ರಕರಣದ ಆರೋಪಿಗಳು ನೀಡಿದ ಹೇಳಿಕೆಯ ಆಧಾರದ ಮೇಲೆ ನಟ ಶ್ರೀಕಾಂತ್ ಅವರನ್ನು ಇಂದು ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಯಿತು.


ಒಂದು ವಾರದ ಹಿಂದೆ, ನುಂಗಂಬಾಕ್ಕಂ ಪೊಲೀಸರು ಘಾನಾ ಮೂಲದ ಜಾನ್ ಎಂಬ ವ್ಯಕ್ತಿಯನ್ನು ಬಂಧಿಸಿ, ಅವರಿಂದ 11 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದರು. ಮಾದಕವಸ್ತು ಕಳ್ಳಸಾಗಣೆಗಾಗಿ ಬಂಧಿಸಲ್ಪಟ್ಟ ಆರೋಪಿ  ಶ್ರೀಕಾಂತ್‌ಗೆ ಕೊಕೇನ್ ಸೇರಿದಂತೆ ಮಾದಕವಸ್ತುಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಿದ ನಂತರ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಇದೀಗ ನಟ ಮಾದಕ ವಸ್ತು ಸೇವಿಸಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಗಳು ಸಾಬೀತುಪಡಿಸಿವೆ.

2002ರಲ್ಲಿ ರೋಜಾ ಕೂಟಂ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ ಶ್ರೀಕಾಂತ್ ಅವರು, ಏಪ್ರಿಲ್ ಮಾಧತಿಲ್ (2002), ಪಾರ್ಥಿಬನ್ ಕಣವು (2003), ಒರು ನಾಲ್ ಒರು ಕಣವು (2005), ಪೂ (2008), ಮತ್ತು ನನ್ಬನ್ (2012) ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *