LATEST NEWS
ಮಂಗಳೂರು ಡ್ರಗ್ ಪೆಡ್ಲರ್ ಗಳ ಪೆರೇಡ್
ಮಂಗಳೂರು ಸೆಪ್ಟೆಂಬರ್ 7: ರಾಜ್ಯದಲ್ಲಿ ಡ್ರಗ್ ಮಾಫಿಯಾ ದಿನದಿಂದ ದಿನಕ್ಕೆ ಏರುತ್ತಲೆ ಇರುವ ಹಿನ್ನಲೆ ಎಚ್ಚತ್ತೆ ರಾಜ್ಯ ಸರಕಾರ ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕಲು ಹೊರಟಿದೆ. ಈ ಹಿನ್ನಲೆ ಇಂದು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಬಳಕೆ ಜಾಲದ ಆರೋಪಿಗಳ ಪರೇಡ್ ನಡೆಸಲಾಗಿದೆ.
ಮಂಗಳೂರಿನ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ಒಟ್ಟು180 ಮಂದಿ ಆರೋಪಿಗಳಿಗೆ ಪರೇಡ್ ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಇದರಲ್ಲಿ 90 ಮಂದಿ ಹಾಜರಾಗಿದ್ದರು. ಇವರಲ್ಲಿ 6 ವಿದ್ಯಾರ್ಥಿಗಳಿದ್ದರು. ಕಳೆದ ವರ್ಷ ಜಿಲ್ಲೆಯಲ್ಲಿ 4 ಮಂದಿ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ಪ್ರಸ್ತಾವ ಕಳುಹಿಸಲಾಗಿತ್ತು. ಇವರಲ್ಲಿ ಒಬ್ಬರ ಮೇಲೆ ಗೂಂಡಾ ಕಾಯಿದೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳಿಗೆ ಕಠಿಣ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿಕಾಶ್, ದಂಧೆಯನ್ನು ಪುನರಾವರ್ತಿಸಿದರೆ ಆಸ್ತಿ ಮಟ್ಟ ಹಾಕುವುದಾಗಿ ತಿಳಿಸಿದರು