LATEST NEWS
ಮಾದಕ ವಸ್ತು ಕೊಕೈನ್ ಮಾರಾಟಕ್ಕೆ ಯತ್ನ ಒರ್ವ ಬಂಧನ

ಮಾದಕ ವಸ್ತು ಕೊಕೈನ್ ಮಾರಾಟಕ್ಕೆ ಯತ್ನ ಒರ್ವ ಬಂಧನ
ಮಂಗಳೂರು ಜೂನ್ 20: ಮಾದಕ ವಸ್ತು ಕೊಕೈನ್ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೊನೀಶ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಸುಲ್ತಾನ್ ಬತ್ತೇರಿ ಸಮೀಪ ಮಾದಕ ವಸ್ತು ಕೊಕೈನ್ ಮಾರಾಟಕ್ಕೆ ಯತ್ನಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ ಸುಮಾರು 16 ಗ್ರಾಂ ತೂಕದ 1,60,000 ರೂಪಾಯಿ ಮೌಲ್ಯದ ಕೊಕೈನ್ ನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕೊಕೇನ್ ತೂಕದ ಯಂತ್ರ ಮತ್ತು 80,000 ರೂಪಾಯಿ ನಗದನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.