LATEST NEWS
ಹೈಎಂಡ್ ಪಾರ್ಟಿಗಳಿಗೆ ಮಾದಕ ವಸ್ತು ಎಲ್ಎಸ್ ಡಿ ಪೂರೈಸುತ್ತಿದ್ದ ಆರೋಪಿ ಆರೆಸ್ಟ್..!!

ಮಂಗಳೂರು ಜೂನ್ 11: ಮಾದಕ ವಸ್ತುಗಳ ವಿರುದ್ದ ಮಂಗಳೂರು ಪೊಲೀಸರ ಸಮರ ಮುಂದುವರೆದಿದ್ದು, ಪಾರ್ಟಿಗಳಿಗೆ ಮಾದಕ ವಸ್ತು ಎಲ್‌ಎಸ್‌ಡಿ ಡ್ರಗ್ ಸ್ಟ್ರಿಪ್ಸ್‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ಕ್ಯಾಲಿಕಟ್ ನ ಮೊಹಮ್ಮದ್ ಅಜಿನಾಸ್ (25) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 16 ಲಕ್ಷ ಮೌಲ್ಯ 840 ಎಲ್ಎಸ್ ಡಿ ಸ್ಟ್ರಿಪ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಮಂಗಳೂರು ಪ್ರಮುಖವಾಗಿ ಕೇರಳ, ಗೋವಾದಲ್ಲಿ ನಡೆಯುವ ಹೈ – ಎಂಡ್ ಪಾರ್ಟಿಗಳಿಗೆ ಮತ್ತು ಗ್ರಾಹಕರಿಗೆ ಎಲ್‌ಎಸ್‌ಡಿ ಡ್ರಗ್ ಅನ್ನು ಸರಬರಾಜು ಮಾಡುತ್ತಿದ್ದ. ಒಂದು ಸ್ಟ್ರಿಪ್‌ಗೆ 2000 ರಿಂದ 6000 ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿ ಮೊಹಮ್ಮದ ಅಜಿನಾಸ್ ಮಂಗಳೂರು ನಗರದ ಕದ್ರಿ ಮೈದಾನದ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಪಡೆದು ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡಿ ಡ್ರಗ್ಸ್ ಪ್ರಮಾಣ ಅಧಿಕವಾಗಿರುವಾಗ ಆತನ ಸಂಪರ್ಕದಲ್ಲಿ ಪೆಡ್ಲರ್ ಹಾಗೂ ಗ್ರಾಹಕರ ಸಂಪರ್ಕವೂ ದೊಡ್ಡ ಮಟ್ಟದಲ್ಲಿರಬಹುದು. ಹೀಗಾಗಿ ಇದರಲ್ಲಿ ಭಾಗಿಯಾಗಿರುವವರನ್ನು ಎಂದು ನಾವು ತನಿಖೆ ಮಾಡುತ್ತೇವೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.