Connect with us

FILM

ಬಿಗ್ ಬಾಸ್ ಗೆ ಹೋಗಿ ಬಂದ ಬೆನ್ನಲ್ಲೇ ಡ್ರೋನ್ ಪ್ರತಾಪ್ ಅರೆಸ್ಟ್ – ಕಾರಣ ಏನು ಗೋತ್ತಾ…!!

ಬೆಂಗಳೂರು ಡಿಸೆಂಬರ್ 12: ಬಿಗ್ ಬಾಸ್ ನ ಮಾಡಿ ಸ್ಪರ್ಧಿ ಡ್ರೋನ್ ಪ್ರತಾಪ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಹೋಗಿ ಬಂದಿದ್ದ ಡ್ರೋನ್ ಪ್ರತಾಪ್ ನನ್ನು BNS ಸೆಕ್ಷನ್ 288, ಸ್ಫೋಟಕ ವಸ್ತು ನಿಯಂತ್ರಣ ಕಾಯ್ದೆ 3ರಅಡಿ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದಾರೆ.


ಇತ್ತೀಚೆಗೆ ಡ್ರೋನ್ ಪ್ರತಾಪ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನೀರಿಗೆ ಕೆಮಿಕಲ್ ಒಂದನ್ನು ಹಾಕಿ ಬ್ಲಾಸ್ಟ್ ಮಾಡಿ ಅದರ ವಿಡಿಯೋ ಮಾಡಿದ್ದರು. ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್‌ ಆಗಿದೆ, ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್‌ ಬಿಲ್ಡಪ್ ಬೇರೆ ಕೊಟ್ಟಿದ್ದರು. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್‌ ಕೂಗಿದ್ದರು. ಈ ವಿಡಿಯೋ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.

ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿತ್ತು. ಯಾವೆಲ್ಲ ಕೆಮಿಕಲ್ ಹಾಕಿದರೆ ಬ್ಲಾಸ್ಟ್ ಆಗುತ್ತೆ ಎಂದು ಲೈವ್‌ನಲ್ಲಿ ಹೇಳಿದ್ದು, ಇದನ್ನು ಕಿಡಿಗೇಡಿಗಳು ಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದರು. ಅಲ್ಲದೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್​ನನ್ನು BNS ಸೆಕ್ಷನ್ 288, ಸ್ಫೋಟವಸ್ತು ನಿಯಂತ್ರಣ ಕಾಯ್ದೆ 3ರಅಡಿ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *