DAKSHINA KANNADA
ಅಡಿಕೆ ವಿಚಾರವನ್ನಿಟ್ಟು ಕಾಂಗ್ರೇಸ್ ನಾಟಕ – ನಳಿನ್ ಕುಮಾರ್ ಕಟೀಲ್
ಅಡಿಕೆ ವಿಚಾರವನ್ನಿಟ್ಟು ಕಾಂಗ್ರೇಸ್ ನಾಟಕ – ನಳಿನ್ ಕುಮಾರ್ ಕಟೀಲ್
ಸುಳ್ಯ ಮಾರ್ಚ್ 4: ಕರಾವಳಿಯಲ್ಲಿ ಅಡಿಕೆ ವಿಚಾರವನ್ನಿಟ್ಟು ಕಾಂಗ್ರೇಸ್ ನಾಟಕವಾಡಲು ಶುರು ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಸುಳ್ಯದಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಸಾರ್ವಜನಿಕ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಮಂಗಳೂರು ಚಲೋ ಜನ ಸುರಕ್ಷಾಯಾತ್ರೆ ಇಂದು ಸುಳ್ಯ ತಲುಪಿದೆ. ಸುಳ್ಯದಲ್ಲಿ ಸಾರ್ವಜನಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಕೋಮುಗಲಭೆಗಳಾಗಿಲ್ಲ, ಅದೇ ರೀತಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಕಾಶ್ಮೀರ ಬಿಟ್ಟರೆ ದೇಶದ ಯಾವ ಕಡೆಯೂ ಬಾಂಬ್ ದಾಳಿಯಾಗಿಲ್ಲ.ದೇಶದ ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕಾನೂನುಗಳನ್ನು ಅನುಸರಿಸಿದ ಸರಕಾರಗಳಿದ್ದರೆ ಅದು ಬಿಜೆಪಿ ಸರಕಾರ ಮಾತ್ರ ಎಂದರು.
ಕರಾವಳಿಯಲ್ಲಿ ಇದೀಗ ಅಡಿಕೆ ವಿಚಾರದಲ್ಲಿ ಕಾಂಗ್ರೇಸ್ ಪಕ್ಷ ನಾಟಕವಾಡಲು ಶುರು ಮಾಡಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇದೀ ಕಾಂಗ್ರೇಸ್ ಪಕ್ಷ ಅಡಿಕೆ ಹಾನಿಕರ ಎನ್ನುವ ವರದಿಯನ್ನು ನೀಡಿತ್ತು. ಇದೀಗ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಅಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ತನ್ನ ನಿಲುವಿಗೆ ಬದ್ಧವಾಗಿದ್ದು, ಅಡಿಕೆ ಹಾನಿಕರವಲ್ಲ ಎನ್ನುವ ವರದಿಯನ್ನು ಶೀಘ್ರವೇ ಕೋರ್ಟ್ ಗೆ ಸಲ್ಲಿಸಲಿದೆ ಎಂದರು.