BANTWAL
ಮಳೆಗೆ ಕೊಚ್ಚಿ ಹೋದ ಸುರಿಬೈಲು-ಖಂಡಿಗ ರಸ್ತೆ ನಡುವಿನ ಕಿರು ಸೇತುವೆಯಡಿ ಅಳವಡಿಸಿದ್ದ ಮೋರಿ
ಬಂಟ್ವಾಳ ಜುಲೈ 18 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಂಟ್ವಾಳ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಯಾಗಿದೆ.
ಕೊಳ್ನಾಡು ಗ್ರಾಮದ ಸುರಿಬೈಲು-ಖಂಡಿಗ ರಸ್ತೆ ನಡುವಿನ ಕಿರು ಸೇತುವೆಯಡಿ ಅಳವಡಿಸಿದ್ದ ಮೋರಿ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸೇತುವೆಯೂ ಕುಸಿದು ಬೀಳುವ ಭೀತಿ ಎದುರಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.
ಈ ವರ್ಷ ಪ್ರಥಮ ಬಾರಿಗೆ ನೀರಿನ ಮಟ್ಟ 7.8 ಮೀ.ದಾಟಿದೆ. ಪಾಣೆ ಮಂಗಳೂರು ಸಮೀಪದ ಆಲಡ್ಕ ಎಂಬಲ್ಲಿ ಮುಳುಗಡೆ ಭೀತಿ ಎದುರಿಸುತ್ತಿದ್ದ ತಗ್ಗು ಪ್ರದೇಶದ 10 ಮನೆಗಳನ್ನು ಸ್ಥಳಾಂತರಗೊಳಿಸಲಾಗಿದೆ.