KARNATAKA
ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಹೈದರಾಬಾದ್ ಮೂಲದ ವೈದ್ಯೆ ಅನನ್ಯ ರಾವ್ ಮೃತದೇಹ ಪತ್ತೆ

ಕೊಪ್ಪಳ ಫೆಬ್ರವರಿ 20: ರೀಲ್ಸ್ ಮಾಡಲು ಹೋಗಿ 20 ಅಡಿ ಎತ್ತರದಿಂದ ನದಿಗೆ ಜಿಗಿದು ನಾಪತ್ತೆಯಾಗಿದ್ದ ವೈದ್ಯೆ ಡಾ. ಅನನ್ಯ ಅವರ ಮೃತದೇಹ ಪತ್ತೆಯಾಗಿದೆ. ನಿನ್ನೆ ಹೈದರಾಬಾದ್ ಮೂಲದ ಡಾ. ಅನನ್ಯ ರಾವ್ ಮೈನಮಪಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನದಿಗೆ ಜಿಗಿದು ಕೊಚ್ಚಿ ಹೋಗಿದ್ದರು.
ನಿನ್ನೆಯಿಂದ ವೈದ್ಯೆ ಅನನ್ಯ ಅವರ ಮೃತದೇಹಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳ, ತೆಪ್ಪ ಹಾಕುವ ಯುವಕರು ತೀವ್ರ ಹುಡುಕಾಟ ನಡೆಸಿದ್ದರು. ಮೃತದೇಹ ಸಿಗದ ಹಿನ್ನೆಲೆಯಲ್ಲಿ ಜಿಂದಾಲ್ ಕಾರ್ಖಾನೆಯ ಎಸ್‌ಡಿಆರ್ ತಂಡದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಂದು ಮುಳುಗು ತಜ್ಞರು ನೀರಿನಲ್ಲಿ ಶೋಧ ಕಾರ್ಯ ನಡೆಸುವಾಗ ಅನನ್ಯ ಅವರ ಮೃತದೇಹ ಪತ್ತೆಯಾಗಿದೆ.

ನದಿಯ ಸುರಂಗದೊಳಗೆ ಅನನ್ಯ ಮೃತದೇಹ ಸಿಲುಕಿತ್ತು. ಜಿಂದಾಲ್ ಕಾರ್ಖಾನೆಯ ರಕ್ಷಣೆ ಪಡೆಯ ಮುಳುಗು ತಜ್ಞ ರಾಜೇಶ್ ಅವರು ಮೊದಲಿಗೆ ಅನನ್ಯರ ಮೃತದೇಹ ಪತ್ತೆ ಹಚ್ಚಿದರು. ಅನನ್ಯ ಕಾಲು ಕಂಡು ರಾಜೇಶ್ ಹೊರತೆಗೆದಿದ್ದು, ತೆಪ್ಪ ಹಾಕುವ ಯುವಕ ತಿಮ್ಮಪ್ಪ, ನರಸಿಂಹ ಹಾಗೂ ಶ್ರೀನಿವಾಸ್ ಸಾಥ್ ನೀಡಿದರು.