DAKSHINA KANNADA
‘ತುಳು-ಲಿಪಿಗೆ ಯುನಿಕೋಡ್ ಸತ್ಯಕ್ಕೆ ದೂರವಾದ ವಿಚಾರ’, ಡಾl ಆಕಾಶ್ ರಾಜ್ ಜೈನ್ ಸ್ಪಷ್ಟನೆ
ಮಂಗಳೂರು : ‘ತುಳು-ಲಿಪಿಗೆ ಯುನಿಕೋಡ್ ಸತ್ಯಕ್ಕೆ ದೂರವಾದ ವಿಚಾರ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಡಾl ಆಕಾಶ್ ರಾಜ್ ಜೈನ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ತುಳುಲಿಪಿಯನ್ನು ಯುನಿಕೋಡ್ ಗೆ ಸೇರಿಸಲಾಗಿದೆ ಎಂಬ ವಿಚಾರವಾಗಿ ಮಾದ್ಯಮಾಗಳಿಗೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ತುಳು ಲಿಪಿಯನ್ನು ಯುನಿಕೋಡ್ ಗೆ ಸೇರ್ಪಡಿಸುವ ಕಾರ್ಯ ಶೇಕಡಾ 80 ರಷ್ಟು ಮಾತ್ರ ಪೂರ್ಣಗೊಂಡಿದೆ. ಇನ್ನಷ್ಟು ತಾಂತ್ರಿಕ ಕಾರ್ಯಗಳು ಬಾಕಿ ಇವೆ. ತುಲುಲಿಪಿಯನ್ನು ಯುನಿಕೋಡ್ ಗೆ ಸೇರ್ಪಡಿಸುವ ಕಾರ್ಯ 2017 ರಲ್ಲಿ ಆರಂಭಿಸಲಾಯಿತು. ಅದಕ್ಕೂ ಸುಮಾರು 10 ವರ್ಷಗಳಷ್ಟು ಮೊದಲು ಬ್ರಾಹ್ಮಿ ಲಿಪಿ ಮೂಲದಿಂದ ಪ್ರಚಲಿತವಿದ್ದ ಉತ್ತರ-ಕನ್ನಡ ಭಾಗದಲ್ಲಿ ಪ್ರಚಲಿತವಿದ್ದ ಇನ್ನೊಂದು ಲಿಪಿ ತಿಗಳಾರಿ ಲಿಪಿಯನ್ನು ಯುನಿಕೋಡ್ ಗೆ ಸೇರ್ಪಡಿಸಲು ವೈಷ್ಣವಿಮೂರ್ತಿ ಮತ್ತು ವಿನೋದ್ ರಾಜ್ ನವರು ಆರಂಭಿಸಿದ ಕಾರ್ಯಕ್ಕೆ “ಯುನಿಕೋಡ್ ಕನ್ಸೊರ್ಟಿಯಮ್ ಕ್ಯಾಲಿಫೋರ್ನಿಯ” ದಿಂದ ಒಪ್ಪಿಗೆ ನೀಡಲಾಗಿದೆ. ಆ ಲಿಪಿಯನ್ನು “ತುಳು-ತಿಗಳಾರಿ” ಲಿಪಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ತುಳು ಲಿಪಿಗೂ ತುಳು ತಿಗಳಾರಿ ಲಿಪಿಗೂ ಸುಮಾರು 25 ಶೇಕಡಾ ವ್ಯತ್ಯಾಸ ಇರುವುದು. ಕನ್ನಡ ಮತ್ತು ತೆಲುಗು ಲಿಪಿಗಳಿದ್ದಂತೆ ಹಲವು ಸಾಮ್ಯತೆಗಳಿರುವ ಎರಡು ಪ್ರಕಾರದ ಲಿಪಿಗಳು ತುಳು ಮತ್ತು ತುಳು-ತಿಗಳಾರಿ ಲಿಪಿಗಳು. ಅಕಾಡೆಮಿ ಯುನಿಕೋಡ್ ಕೇಳಿದ್ದು ಈಗಿರುವ ತುಳು ಭಾಷೆಗೆ, ವೈಷ್ಣವಿ ಮೂರ್ತಿ (ತುಳು ತಿಗಳಾರಿ) ಕೇಳಿದ್ದು ತಾಳೆಗರಿ ಸಂಸ್ಕೃತ ಸಾಹಿತ್ಯಕ್ಕೆ. ಹಾಗೆಯೇ ಯು. ಬಿ. ಪವನಜ ಅವರು ತುಳು ಲಿಪಿಯನ್ನು ಯುನಿಕೋಡ್ ಗೆ ಸೇರಿಸುವಲ್ಲಿ ಕೇವಲ ಪ್ರಸ್ತಾವನೆಯನ್ನು ಮಾತ್ರ ಕಳುಹಿಸಿರುತ್ತಾರೆ. ತದನಂತರ ಯಾವುದೇ ಕಾರ್ಯವನ್ನು ಮಾಡಿರುವುದಿಲ್ಲ. 2017 ರಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಡಾ. ಆಕಾಶ್ ರಾಜ್ ಜೈನ್ ರವರ ನೇತೃತ್ವದಲ್ಲಿ ” ಜೈ ತುಳುನಾಡು” ಸಂಘಟನೆಯ ಯುವಕರ ಜೊತೆಗೂಡಿ ಅಂದಿನ ಮುಖ್ಯಮಂತ್ರಿ ಯಡಿಯೂಪ್ಪರವರ ಇ – ಗರ್ವನೆನ್ಸ್ ಕಾರ್ಯದರ್ಶಿಯಾಗಿದ್ದ ಬೇಳೂರು ಸುದರ್ಶನರವರ ಸಹಕಾರವನ್ನು ಪಡೆದು ತುಳು ಯುನಿಕೋಡ್ ಕಾರ್ಯವನ್ನು ಮುಂದುವರೆಸಲಾಯಿತು. ಅಂದಿನ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ರವರು ಈ ಕಾರ್ಯಕ್ಕೆ ಬೆನ್ನೆಲುಭಾಗಿದ್ದರು. 2017 ಕ್ಷಣ ಮುನ್ನ 2001 ರಿಂದ ತುಳು ಲಿಪಿ ಅಧ್ಯಯನ ಪರಿಷ್ಕರಣೆ ಕಾರ್ಯವು ದಿl ವೆಂಕಟರಾಜ ಪುಣಿಂಚತ್ತಾಯರಿಂದ ಹಿಡಿದು ಅವರ ಶಿಷ್ಯ ರಾಧಾಕೃಷ್ಣ ಬೆಳ್ಳೂರು ಹಾಗೂ ವಿದ್ವಾಂಸರಾದ ವಿಘ್ನರಾಜ್ ಧರ್ಮಸ್ಥಳ, ಎಸ್. ಎ. ಕೃಷ್ಣಯ್ಯ, ಇನ್ನೂ ಹಲವರು ಹಾಗೂ 2017 ಕ್ಕೂ ಹಿಂದಿನ ತುಳು ಅಕಾಡೆಮಿಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳ ಶ್ರಮದಿಂದ ಆಗಿರುವಂತದ್ದು.ಪ್ರಸ್ತುತ ತುಳು ಲಿಪಿ ಯುನಿಕೋಡ್ ಸೇರ್ಪಡೆ ಸಂಪೂರ್ಣಗೊಳಿಸಲು ಇನ್ನೂ ಸ್ವಲ್ಪ ಕಾರ್ಯ ಬಾಕಿಯಿದ್ದು, ಆಸಕ್ತರು ಆಗಿರುವ ಕಾರ್ಯದ ಸಂಪೂರ್ಣ ವಿವರವನ್ನು ‘ಯುನಿಕೋಡ್ ಕನ್ಸೊರ್ಟಿಯಮ್’ ವೆಬ್ ಸೈಟ್ ನಲ್ಲಿ ತುಳು ಯುನಿಕೋಡ್ ವಿಚಾರ ಆಯ್ಕೆ ಮಾಡಿ ತಿಳಿದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.