Connect with us

LATEST NEWS

ಚೆನ್ನೈಯಲ್ಲಿ ಗಂಟೆಯೊಳಗೆ 29 ಜನರನ್ನು ಕಚ್ಚಿದ ನಾಯಿಯಲ್ಲಿ ರೇಬೀಸ್‌ ಸೋಂಕು ಪತ್ತೆ..!

ಚೆನ್ನೈ: ಚೆನ್ನೈ ನಗರದ ರಾಯಪುರಂ ಎಂಬಲ್ಲಿ ಒಂದು ಗಂಟೆಯೊಳಗೆ 29 ಜನರನ್ನು ಕಚ್ಚಿದ ನಾಯಿಯಲ್ಲಿ ರೇಬೀಸ್‌ ಸೋಂಕು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.

ನವೆಂಬರ್ 22 ರಂದು ಘಟನೆ ನಡೆದಿದ್ದು, ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದ ಈ ಬೀದಿ ನಾಯಿಯನ್ನು ಹೊಡೆದು ಕೊಲ್ಲಲಾಗಿತ್ತು.

ಮೃತ ನಾಯಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ರೇಬೀಸ್‌ ವೈರಸ್ ಪತ್ತೆಯಾಗಿದೆ.

ನಾಯಿ ಕಡಿತದಿಂದ ಗಾಯಗೊಂಡ 5 ಮಕ್ಕಳು ಸೇರಿದಂತೆ 29 ಜನರನ್ನು ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಆಂಟಿ ರೇಬಿಸ್ ಲಸಿಕೆಯನ್ನು ಆರಂಭಿಕ ಡೋಸ್ ನೀಡಲಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *