Connect with us

    KARNATAKA

    ರಕ್ತದಾನ ಮಾಡಿ ಮತ್ತೊಂದು ಶ್ವಾನದ ಜೀವ ಉಳಿಸಿದ ಕೊಪ್ಪಳದ ‘ಭೈರವ’..!

    ಕೊಪ್ಪಳ: ದಾನದಲ್ಲೇ ಮಹಾದಾನವಾಗಿರುವ ರಕ್ತದಾನ ಮಾಡಿ ಇನ್ನೊಬ್ಬನ ಜೀವ ಉಳಿಸುವುದು ಮಾನವರಲ್ಲಿ ಸಾಮಾನ್ಯ ಸಂಗತಿ ಆದರೆ ಕೊಪ್ಪಳದಲ್ಲಿ ಇದಕ್ಕೂ ಮೀರಿದ ಪ್ರಸಂಗ ನಡೆದಿದೆ. ಶ್ವಾನದ ಪ್ರಾಣ ಉಳಿಸಲು ಮತ್ತೊಂದು ಶ್ವಾನ ರಕ್ತದಾನ ಮಾಡಿದ ಘಟನೆ ನಡೆದಿದೆ.

    ಕೊಪ್ಪಳ  ನಗರದ 9 ವರ್ಷ ಲ್ಯಾಬ್ರಡಾರ್(Labrador) ನಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿ ರಕ್ತದ ಅತ್ಯವಶ್ಯಕತೆ ಇತ್ತು. ಇದನ್ನು ಅರಿತ ವೈದ್ಯರುಗಳು ನಗರದ ಮೂರು ನಾಯಿಗಳ ವಿಳಾಸಗಳನ್ನು ಸಂಪರ್ಕಿಸಿ ಅವುಗಳ ರಕ್ತದ ಸ್ಯಾಂಪಲ್  ಗಳನ್ನು ಪರೀಕ್ಷೆಗೆ ಒಳಪಡಿಸಿದರು. ಮೂರು ನಾಯಿಗಳಲ್ಲಿ ಬಸವರಾಜ ಪೂಜಾರ್ ಎಂಬವರ  ಸಾಕು ನಾಯಿ ಮೂರು ವರ್ಷದ ಡಾಬರ್ ಮೆನ್ Doberman) ನ ರಕ್ತ ಮ್ಯಾಚ್ ಆಗಿದೆ. ವೈದ್ಯಕೀಯ ನಿಯಮಾನುಸಾರ ಇದರ 300 ml ರಕ್ತವನ್ನು ಪರೀಕ್ಷಿಸಿ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬ್ರಡಾರ್ ಗೆ ನೀಡಲಾಗಿದೆ. ಪ್ರಾಣಿಯೊಂದು ಇನ್ನೊಂದು ಪ್ರಾಣಿಗೆ ರಕ್ತದಾನ ಮಾಡಿರುವ  ಅಪರೂಪದ ಕಾರ್ಯ ಪಶು ಚಿಕಿತ್ಸಾಲಯದಿಂದ ನಡೆದಿದೆ. “ದಾನಗಳಲ್ಲಿ ರಕ್ತದಾನವೆ ಶ್ರೇಷ್ಟ ದಾನ”ಎಂಬುದಕ್ಕೆ ಪ್ರಾಣಿಗಳೂ ಕೂಡ ಸಾಥ್ ಕೊಡಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply