LATEST NEWS
ವೈದ್ಯರ ಎಡವಟ್ಟು; ಮಗನ ಬದಲಿಗೆ ತಂದೆಗೆ ಆಪರೇಷನ್!

ಜೈಪುರ, ಏಪ್ರಿಲ್ 18: ರಾಜಸ್ಥಾನದ ಕೋಟಾ ವೈದ್ಯಕೀಯ ಕಾಲೇಜಿನ ವೈದ್ಯರು ದೊಡ್ಡ ಎಡವಟ್ಟು ಮಾಡಿ ಸುದ್ದಿಯಲ್ಲಿದ್ದಾರೆ. ಈ ಆಸ್ಪತ್ರೆಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಅಪಘಾತಕ್ಕೊಳಗಾದ ವ್ಯಕ್ತಿಯ ಪಾರ್ಶ್ವವಾಯು ಪೀಡಿತ ತಂದೆಗೆ ವೈದ್ಯರು ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ನಿಜವಾದ ರೋಗಿ ಮನೀಶ್ ಅಪಘಾತಕ್ಕೀಡಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ಗಾಯಗಳಾಗಿತ್ತು.

ಅವರಿಗೆ ಶಸ್ತ್ರಚಿಕಿತ್ಸೆ ಶನಿವಾರ ನಡೆಯಬೇಕಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಆಸ್ಪತ್ರೆಯಲ್ಲಿ ಅವರು ಸಹಾಯಕ್ಕಾಗಿ ತನ್ನ ತಂದೆಗೆ ಕರೆ ಮಾಡಿದ್ದರು. ಆಪರೇಷನ್ ಮಾಡುವಾಗ ಸಹಾಯಕ್ಕಾಗಿ ಯಾರಾದರೂ ಬೇಕೆಂದು ಅವರು ಫೋನ್ ಮಾಡಿದ್ದರು. ಪಾರ್ಶ್ವವಾಯು ಪೀಡಿತರಾಗಿದ್ದ ಆತನ ತಂದೆ ಆಸ್ಪತ್ರೆಗೆ ಬಂದಿದ್ದರು.
ಆಪರೇಷನ್ ಥಿಯೇಟರ್ ಒಳಗೆ ಶಸ್ತ್ರಚಿಕಿತ್ಸೆಗೆ ಸಿದ್ಧವಾಗುತ್ತಿರುವಾಗ ತನ್ನ ತಂದೆ ಹೊರಗೆ ಕಾಯುತ್ತಿದ್ದರು ಎಂದು ಮನೀಶ್ ಹೇಳಿಕೊಂಡಿದ್ದಾರೆ. ಆದರೆ, ನಾನು ಹೊರಬಂದ ನಂತರ, ತನ್ನ ತಂದೆಯ ದೇಹದ ಮೇಲೆ 5-6 ಹೊಲಿಗೆಗಳನ್ನು ನೋಡಿದೆ. ತನ್ನ ತಂದೆಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ನನಗೆ ಗೊತ್ತಾಯಿತು ಎಂದು ಅವರು ಆರೋಪಿಸಿದ್ದಾರೆ.
2 Comments