DAKSHINA KANNADA
ಕೃಷಿ ಅಧ್ಯಯನಕ್ಕೆ ಫಾರ್ಮ್ ಹೌಸ್ ಗೆ ಬಂದಿದ್ದ ಯುವ ವೈದ್ಯೆಯ ಧಾರುಣ ಸಾವು…!!
ವಿಟ್ಲ ಸೆಪ್ಟೆಂಬರ್ 15: ಕೃಷಿ ಅಧ್ಯನಕ್ಕಾಗಿ ಫಾರ್ಮ್ ಹೌಸ್ ಗೆ ಬಂದಿದ್ದ ಯುವತಿಯೊಬ್ಬಳು ಸಾಹಸಕ್ರೀಡೆಗಳನ್ನು ಆಡುವ ನೀರಿನ ಹೊಂಡಕ್ಕೆ ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಮಂಗಳೂರಿನ ಪ್ರಶಾಂತ ನಗರ ನಿವಾಸಿ ಡಾ. ಮೈಜಿ ಕರೋಲ್ (31) ಎಂದು ಗುರುತಿಸಲಾಗಿದೆ. ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳದ ಮೈಜಿ ಫೆರ್ನಾಂಡೀಸ್ ಕೃಷಿ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದಲ್ಲಿ ವಾರಣಾಸಿ ಪಾರ್ಮ್ ಗೆ ಕೆಲವು ದಿನಗಳ ಹಿಂದೆ ಆಗಮಿಸಿದ್ದರು. ಎರಡು ದಿನ ಊರಿಗೆ ಹೋಗಿ ಮತ್ತೆ ಬಂದು ಇಲ್ಲೇ ವಾಸ್ತವ್ಯ ಮಾಡಿದ್ದರು.
ಈ ವೇಳೆ ಫಾರ್ಮ್ ಹೌಸ್ನಲ್ಲಿ ನೀರಿನ ಹೊಂಡ ನೋಡಿದ ಮೈಜೀಗೆ ಈಜಲು ಮನಸಾಗಿದೆ. ತಕ್ಷಣ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಆಸೆಯಿಂದ ನೀರಿಗೆ ಇಳಿದಿದ್ದಾಳೆ. ಈ ಸಂದರ್ಭ ನೀರಿನ ಒಳಗೆ ಮುಳುಗಿದ್ದು, ಸಮಯವಾದರೂ ಮರಳಿ ಬಾರದ ಸಂದರ್ಭ ಇವರು ಕೆರೆಯ ಕಡೆಗೆ ಹೋಗುವುದನ್ನು ಗಮನಿಸಿದ ಈಜು ಕಲಿಯುವ ವಿದ್ಯಾರ್ಥಿಗಳು ಕೆರೆಯ ಬಳಿಕೆ ಬಂದು ಕೆರೆಯಲ್ಲಿ ಹುಡುಕಾಡಿದಾಗ ದೇಹ ಪತ್ತೆಯಾಗಿದೆ.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ