DAKSHINA KANNADA
ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ
ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ
ಪುತ್ತೂರು ಜೂನ್ 29: ಪುತ್ತೂರಿನ ಸಂಪ್ಯ ಪೋಲೀಸರಿಂದ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ವಿಚಾರಿಸಲು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬಾಲಕಿಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರಲ್ಲಿ ವಿಚಾರಿಸುವುಕ್ಕಾಗಿ ಕರ್ತವ್ಯ ನಿರತರಾಗಿದ್ದ ವೈದ್ಯೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್ ಗೆ ಕರೆದಿದ್ದರು.
ಆದರೆ ವೈದ್ಯರು ಬರುವುದು ತಡವಾಗಿರುವುದಕ್ಕೆ ವೈದ್ಯರ ಮೇಲೆ ಕಿಡಿಕಾರಿದ ಅಧ್ಯಕ್ಷರು, ಜನಪ್ರತಿನಿಧಿಯಾದ ತನ್ನಲ್ಲೇ ಇಷ್ಟೊಂದು ಬೇಜಾವಾಬ್ದಾರಿಯಿಂದ ವರ್ತಿಸುವ ನೀವು ಜನ ಸಾಮಾನ್ಯರಲ್ಲಿ ಯಾವ ರೀತಿ ವರ್ತಿಸಬಹುದು ಎಂದು ತರಾಟೆಗೆ ತೆಗೆದುಕೊಂಡರು.
ಹಲ್ಲೆಗೊಳಗಾಗಿರುವ ಬಾಲಕಿ ದಲಿತೆ ಎನ್ನುವ ತಾತ್ಸಾರವೇ ಎನ್ನುವ ಜಾತಿ ಕಾರ್ಡನ್ನೂ ವೈದ್ಯರ ಮುಂದೆ ಎಳೆದು ತಂದರು. ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೇರೆ ರೋಗಿಯನ್ನು ಪರೀಕ್ಷೆ ಮಾಡುತ್ತಿದ್ದೆ ಎನ್ನುವ ಸಮಜಾಯಿಷಿಯನ್ನು ವೈದ್ಯರು ನೀಡಿದರೂ,
ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ತನ್ನನ್ನು ಅರ್ಧ ಗಂಟೆ ಕಾಯಿಸಿದ ವೈದ್ಯರ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.