LATEST NEWS
35.11 ಲಕ್ಷ ಮೌಲ್ಯದ 351 ಕೆಜಿ ಮಾದಕ ವಸ್ತುಗಳನ್ನು ನಾಶಪಡಿಸಿದ ಪೊಲೀಸರು…!!
ಮಂಗಳೂರು ಜೂನ್ 26: ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನವಾದ ಇಂದು ಮಂಗಳೂರಿನಲ್ಲಿ ಸುಮಾರು 35 ಲಕ್ಷ ಮೌಲ್ಯದ 35 1 ಕೆ.ಜಿ ಮಾದಕ ವಸ್ತುಗಳನ್ನು ನಾಶಪಡಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೆಟ್ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ಗಾಂಜಾ, ಕೊಕೇನ್ ಎಂಡಿಎಂಎ, ಎಲ್ಎಸ್ಡಿ ಚರಸ್ ಮುಂತಾದ ಮಾದಕ ವಸ್ತುಗಳನ್ನು ಮುಲ್ಕಿಯಲ್ಲಿ ನಾಶಪಡಿಸಲಾಯಿತು.
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 130 ಕೆಜಿ ಗಾಂಜಾ, 68 ಗ್ರಾಂ ಎಂಡಿಎಂಎ, 41 ಸ್ಟ್ರಿಪ್ ಎಲ್ಎಸ್ ಡಿ, 18 ಎಂಎಲ್ ಕೊಕೇನ್ ಮತ್ತು 18 ಗ್ರಾಂ ಬ್ರೌನ್ ಶುಗರ್ ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಿಲೇವಾರಿ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾನೆ ಅವರ ಮಾರ್ಗದರ್ಶನದಲ್ಲಿ 25,11,080 ರೂ.ಗಳ 221.9 ಕೆಜಿ ಗಾಂಜಾವನ್ನು ವಿಲೇವಾರಿ ಮಾಡಲಾಗಿದ್ದು, ಇದನ್ನು ಜಿಲ್ಲಾ ಮಿತಿ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳಲ್ಲಿ, ಸುಮಾರು 10 ಲಕ್ಷ ಮೌಲ್ಯದ 130 ಕೆಜಿ ಗಾಂಜಾ, 68 ಗ್ರಾಂ ಎಂಡಿಎಂಎ, 41 ಸ್ಟ್ರಿಪ್ ಎಲ್ಎಸ್ಡಿ, 18 ಎಂಎಲ್ ಕೊಕೇನ್ ಮತ್ತು 18 ಗ್ರಾಂ ಬ್ರೌನ್ ಶುಗರ್ ಯನ್ನು ವಶಪಡಿಸಿಕೊಳ್ಳಲಾಗಿತ್ತು.