LATEST NEWS
ಅಂಗನವಾಡಿ ಪರಿಶೀಲಿಸಲಿದ್ದಾರೆ ಜಿಲ್ಲಾಮಟ್ಟದ ಅಧಿಕಾರಿಗಳು..
ಅಂಗನವಾಡಿ ಪರಿಶೀಲಿಸಲಿದ್ದಾರೆ ಜಿಲ್ಲಾಮಟ್ಟದ ಅಧಿಕಾರಿಗಳು..
ಉಡುಪಿ ಡಿಸೆಂಬರ್ 12: ಅಂಗನವಾಡಿಗಳ ಮೂಲಕವೇ ಮಕ್ಕಳ ಸದೃಢ ಬೆಳವಣಿಗೆ ಪ್ರಾರಂಭವಾಗಲಿದ್ದು, ಉಡುಪಿ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳು, ಪೂರಕ ಪೌಷ್ಠಿಕ ಆಹಾರ ವಿತರಣೆ, ಅಲ್ಲಿನ ಮಕ್ಕಳ ಆರೋಗ್ಯ ಗುಣಮಟ್ಟ ಪರಿಶೀಲಿಸಲು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಅವರ ಸೂಚನೆಯಂತೆ, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನಿರ್ದೇಶನಲ್ಲಿ ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳು ನಿಯಮಿತ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಜಿಲ್ಲಾಮಟ್ಟದ ಅಧಿಕಾರಿಗಳು ಅಂಗನವಾಡಿ ಕೆಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಕುರಿತು ಚೆಕ್ ಲಿಸ್ಟ್ ಸಹ ಈಗಾಗಲೇ ಸಿದ್ದಪಡಿಸಿದ್ದು, ಅಂಗನವಾಡಿಗೆ ಭೇಟಿ ನೀಡಿದ ದಿನಾಂಕ, ಅಲ್ಲಿನ ಕಾರ್ಯಕರ್ತೆ ಮತ್ತು ಸಹಾಯಕರು ಹಾಜರಿರುವ ಬಗ್ಗೆ, ಅಲ್ಲಿರುವ ಮಕ್ಕಳ ಸಂಖ್ಯೆ, ಒಳಾಂಗಣ ದ ಸ್ವಚ್ಚತೆ, ಹೊರಾಂಗಣ ಸವಚ್ಛತೆ, ಮಕ್ಕಳ ಸ್ವಚ್ಚತೆ, ಅಂನವಾಡಿ ಕಟ್ಟಡದ ಸ್ಥಿತಿಗತಿ, ವಿದ್ಯುತ್ ಸಂಪರ್ಕ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ, ನೀರಿನ ಸೌಕರ್ಯ, ಪ್ರತ್ಯೇಕ ಅಡುಗೆ ಕೋಣೆ, ಶೌಚಾಲಯದ ಸ್ಥಿತಿಗತಿ, ಪೌಷ್ಠಿಕ ತೋಟ ರಚನೆ, ಆವರಣ ಗೋಡೆ, ಅಂಗವಾಡಿಯಲ್ಲಿ ದಾಖಲಾಗಿರುವ ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ, ಮಾತೃವಂದನಾ ಯೋಜನೆ ಪಡೆಯುತಿರುವ ವಿವರ, ಮಕ್ಕಳಿಗೆ ಆಟಿಕೆ ಸರಬರಜು, ಅವುಗಳ ಉಪಯೋಗ, ಪೂರಕ ಪೌರ್ಷಠಿಕ ಆಹಾರ ಸರಬರಾಜು ಬಗ್ಗೆ, ಅದರ ಗುಣಮಟ್ಟದ ಬಗ್ಗೆ, ಅಪೌಷ್ಠಿಕ ಮಕ್ಕಳ ಸಂಖ್ಯೆ, ಮತ್ತು ವಿವಿಧ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸುತಿರುವ ಬಗ್ಗೆ , ಭೇಟಿಯ ದಿನ ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ವಿತರಿಸುರುವ ಬಗ್ಗೆ, ಬಾಲ ವಿಕಾಸ ಸಮಿತಿ ಸಭೆ ನಡೆಸಿರುವ ಬಗ್ಗೆ ಸೇರಿದಂತೆ ಪ್ರತಿ ಅಂಗನವಾಡಿಗಳ ಸಮಗ್ರ ಪರಿಶೀಲನೆ ಮತ್ತು ಮೌಲ್ಯ ಮಾಪನ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಯಾವುದೇ ಮಗು ಹಾಗೂ ಗರ್ಭಿಣಿ ಬಾಣಂತಿಯರು ಅಪೌಷ್ಠಿಕತೆಯಿಂದ ಬಳಲ ಬಾರದು ಎಂಬ ಉದ್ದೇಶದಿಂದ ಕಾರ್ಯಗತಗೊಂಡಿರುವ ಈ ಯೋಜನೆಯಿಂದ , ಸೂಕ್ತ ಸಔಲಭ್ಯಗಳಿಲ್ಲದ ಅಂಗನವಾಡಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ , ಭೇಟಿಯ ಸಮಯದಲ್ಲಿ ಕಂಡು ಬರುವ ಅಪೌಷ್ಠಿಕತೆ ಮತ್ತು ಆರೋಗ್ಯದ ಸಮಸ್ಯೆಯಿಂದ ಬಳಲುತಿರುವ ಮಕ್ಕಳು ಮತ್ತು ಬಾಣಂತಿಯರಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಮತ್ತು ಮಕ್ಕಳಲ್ಲಿ ಕಂಡು ಬರುವ ವಯಸ್ಸಿಗೆ ತಕ್ಕ ಬೆಳವಣಿಗೆ ಕೊರತೆ, ಎತ್ತರಕ್ಕೆ ತಕ್ಕಂತೆ ತೂಕದ ಸಮಸ್ಯೆ ಇವುಗಳನ್ನು ಪರಿಹರಿಸಿ, ಆರೋಗ್ಯವಂತ ಸ್ವಸ್ಥ ಸಮಾಜ ನಿರ್ಮಾಣದೊಂದಿಗೆ ಸಧೃಢ ಪ್ರಜೆಗಳನ್ನು ರೂಪಿಸುವ ಉದ್ದೇಶವೂ ಇದೆ…