KARNATAKA
ಗಣೇಶೋತ್ಸವದ ದುಡ್ಡಿಗೆ ಬಡಿದಾಡಿಕೊಂಡ ಸಹೋದರರು, ಒರ್ವನ ಸಾವಿನಲ್ಲಿ ಅಂತ್ಯ..!!

ಕಾರವಾರ: ಮನೆಯಲ್ಲಿ ಗಣೇಶ ಪೂಜೆಯ ಹಣದ ವಿಚಾರದಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದು ಸಹೋದರ ಸಂದೇಶ್ ಪ್ರಭಾಕರ್ ಬೋರ್ಕರ್ ನನ್ನು ಆರೋಪಿ ಮನೀಶ್ ಕಿರಣ್ ಬೋರ್ಕಾರ್ ಹತ್ಯೆಗೈದಿದ್ದಾನೆ. ಕುರಿತು ಪ್ರಕರಣ ದಾಖಲಿಸಿಕೊಂಡ ಕಾರವಾರ ನಗರ ಠಾಣಾ ಪೊಲೀಸರು ಆರೋಪಿ ಮನೀಶ್ ಕಿರಣ್ನನ್ನು ಈಗಾಗಲೇ ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಶರತ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರತೀ ವರ್ಷ ಗಣಪತಿ ಹಬ್ಬದಂದು ಶಿರಸಿಯಿಂದ ಬರುವ ಕುಟುಂಬಸ್ಥರು ಕಾರವಾರದಲ್ಲಿ ಎಲ್ಲರೂ ಸೇರಿ ಗಣೇಶನ ಹಬ್ಬ ಮಾಡ್ತಿದ್ರು. ಪ್ರಭಾಕರ್ ಎಂಬವರು ಕಳೆದ ವರ್ಷದ ಹಣದ ಲೆಕ್ಕ ನೀಡಿಲ್ಲ ಎಂದು ಕುಟುಂಬಸ್ಥರು ಗಲಾಟೆ ಎಬ್ಬಿಸಿದರು. ಈ ವೇಳೆ ಪ್ರಭಾಕರ್ ಮಕ್ಕಳಾದ ಸಂದೇಶ ಹಾಗೂ ಶರತ್ ಸಹಾಯಕ್ಕೆ ಬಂದಿದ್ರು. ಇದನ್ನು ನೋಡಿ ಪ್ರಭಾಕರ್ ತಂಗಿ ಮಕ್ಕಳಾದ ಕಿರಣ್, ಪ್ರಶಾಂತ್, ರತನ್, ಮನೀಶ್ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಉಳಿದವರು ಸಂದೇಶನನ್ನು ಕೆಳಗೆ ಬೀಳಿಸಿದ್ರೆ, ಮನೀಶ್ ಚಾಕು ಹಿಡಿದು ಹೊಟ್ಟೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಂದೇಶ ಮೃತಪಟ್ಟಿದ್ದಾರೆ.
Continue Reading