DAKSHINA KANNADA
ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ – ಸಚಿವ ದಿನೇಶ್ ಗುಂಡೂರಾವ್
ಪುತ್ತೂರು ಡಿಸೆಂಬರ್ 21: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಹೇಳಿರುವ ವಿಡಿಯೋ ನಾವು ನೋಡಿದ್ದೇವೆ, ಇದು ಕಟ್ಟುಕಥೆಯಲ್ಲ ಅಲ್ಲದೆ ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆ
ಸಿ.ಟಿ.ರವಿ ಹೇಳಿಕೆ ಸಹಿಸಲು ಅಸಾಧ್ಯವಾದುದು ಅವರ ಹೇಳಿಕೆಗೆ ಅಗತ್ಯ ಕಾನೂನು ಕ್ರಮ ಆಗಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಸಭಾಪತಿಗಳೂ ಈ ವಿಚಾರವನ್ನು ಪ್ರಿವಿಲೇಜ್ ಕಮಿಟಿಗೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ, ಬಿಜೆಪಿಯವರು ದೇವರು, ಧರ್ಮ, ಭಾರತ್ ಮಾತಾ ಕಿ ಜೈ ಮಾತ್ರ ಹೇಳೋದು, ಆದರೆ ಮಹಿಳೆಯರ ಬಗ್ಗೆ ಅವರಿಗೆ ಗೌರವವಿಲ್ಲ ಎಂದರು.
ಇನ್ನು ಸಿಟಿ ರವಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿರೋದು ಕಾನೂನು ಕ್ರಮ, ಬೇಲ್ ಸಿಕ್ಕಿದ ವಿಚಾರದಲ್ಲಿ ಬಿಜೆಪಿ ಡ್ರಾಮಾ ಮಾಡುತ್ತಿದೆ. ಸಿ.ಟಿ. ರವಿ ಕೊಲ್ಲಿ ಕೊಲ್ಲಿ ಎನ್ನುತ್ತಾರೆ. ಅವರನ್ನು ಕೊಂದು ನಮಗೇನು ಆಗಬೇಕಿದೆ. ಸಿ.ಟಿ.ರವಿ ವಿಚಾರದಲ್ಲಿ RSS ಮತ್ತು ಸಂಘಟನೆಗಳ ನಿಲುವೇನು ಎನ್ನುವುದನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದರು.